ಬುಲಂದ್‌ಶಹರ್(ಉತ್ತರಪ್ರದೇಶ) :ಪೊಲೀಸರ ಗುಂಡಿನ ದಾಳಿಯಲ್ಲಿ ಇಬ್ಬರು ಕ್ರಿಮಿನಲ್ಗಳು ಗಾಯಗೊಂಡಿರುವ ಘಟನೆ ಬುಲಂದ್ಶಹರ್ನಲ್ಲಿ ನಡೆದಿದೆ.
ಪೊಲೀಸರ ಗುಂಡಿನ ದಾಳಿ: ಇಬ್ಬರು ಕ್ರಿಮಿನಲ್ಗಳಿಗೆ ಗಾಯ! - Bulandshahr crossfire
ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರ ಹೆಡೆಮುರಿ ಕಟ್ಟಲು ಯುಪಿ ಪೊಲೀಸರು ಮುಂದಾಗಿದ್ದಾರೆ. ಕ್ರಿಮಿನಲ್ಗಳನ್ನ ಬಂಧಿಸಲು ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಇಬ್ಬರು ಕ್ರಿಮಿನಲ್ಗಳು ಗಾಯಗೊಂಡಿದ್ದಾರೆ.
ಪೊಲೀಸರ ಗುಂಡಿನ ದಾಳಿ
ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಒಬ್ಬ ರೌಡಿ ಶೀಟರ್ನನ್ನು ಸಿಕಂದ್ರಾಬಾದ್ ಎನ್‌ಹೆಚ್-91ರಲ್ಲಿ ಹಿಡಿಯಲಾಗಿದೆ. ಮತ್ತೊಬ್ಬನನ್ನು ಕೈಗಾರಿಕಾ ಪ್ರದೇಶದಲ್ಲಿ ಬಂಧಿಸಲಾಗಿದೆ. ಪೊಲೀಸರು ಆರೋಪಿಗಳಿಂದ ಪಿಸ್ತೂಲ್ ಹಾಗೂ ಸಿಡಿಮದ್ದುಗಳನ್ನು ವಶಪಡಿಸಿಕೊಂಡಿದ್ದಾರೆ.