ಕರ್ನಾಟಕ

karnataka

ETV Bharat / bharat

ಪೊಲೀಸರ ಮೇಲೆ ದಂಪತಿಯಿಂದ ಹಲ್ಲೆ; ಕೈಬೆರಳು ಕಳೆದುಕೊಂಡ ಸಿಬ್ಬಂದಿ - ಕೇರಳ

ಅಕ್ರಮ ಮದ್ಯವನ್ನು ಸಂಗ್ರಹಿಸಿದ್ದಾರೆ ಎಂಬ ಶಂಕೆಯ ಮೇರೆಗೆ ದಾಳಿ ನಡೆಸಿದ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ದಂಪತಿ ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ಅಧಿಕಾರಿಯ ಕೈಬೆರಳು ತುಂಡಾಗಿದೆ.

ಅಕ್ರಮ ಮದ್ಯ ಶೇಖರಣೆ ಹಿನ್ನೆಲೆ ದಾಳಿ
ಅಕ್ರಮ ಮದ್ಯ ಶೇಖರಣೆ ಹಿನ್ನೆಲೆ ದಾಳಿ

By

Published : Apr 13, 2020, 11:43 AM IST

ಇಡುಕ್ಕಿ (ಕೇರಳ):ಇಡುಕ್ಕಿ ಬಳಿಯ ಉಪ್ಪಥಾರದಲ್ಲಿ ಅಕ್ರಮ ಮದ್ಯ ಸಂಗ್ರಹಿಸಿದ ಕಾರಣಕ್ಕೆ ದಾಳಿ ನಡೆಸಿದ ಪೊಲೀಸರ ಮೇಲೆ ದಂಪತಿ ಹಲ್ಲೆ ಮಾಡಿದ್ದಾರೆ.

ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, ಇದರಲ್ಲಿ ಒಬ್ಬರ ಕೈಬೆರಳು ತುಂಡಾಗಿ ಗಂಭೀರ ಸ್ವರೂಪದ ಗಾಯವಾಗಿದೆ. ಮನೆಯಲ್ಲಿ ಭಟ್ಟಿ ಇಳಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿಗಳಾದ ಥಾಮಸ್ ಜಾನ್ (34) ಮತ್ತು ಅನಿಮನ್ ಅಯ್ಯಪ್ಪನ್ (33) ಅವರಿಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ನಮ್ಮ ದಾಳಿಯಿಂದ ಬೆಚ್ಚಿದ ಅವರು, ಮದ್ಯವನ್ನು ಚರಂಡಿಗೆ ಸುರಿಯಲು ಯತ್ನಿಸಿದರು. ಅದನ್ನು ನಾವು ತಡೆದವು. ಅದರೆ, ಈ ನಡುವೆ ಉಂಟಾದ ಗಲಾಟೆಯಲ್ಲಿ ನಮ್ಮ ಪೊಲೀಸ್​ ಸಿಬ್ಬಂದಿ ಜಾನ್​ ಅವರು ತಮ್ಮ ಕೈ ಬೆರಳುಗಳನ್ನು ಕಳೆದುಕೊಂಡರು ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ದಂಪತಿಯನ್ನು ಬಂಧಿಸಲಾಗಿದೆ.

ಪಂಜಾಬ್​ನಲ್ಲಿ ಪೊಲೀಸ್​ ತಂಡದ ಮೇಲೆ ಪುಂಡರ ಗುಂಪೊಂದು ದಾಳಿ ನಡೆಸಿ ಸಬ್‌ಇನ್ಸ್‌ಪೆಕ್ಟರ್​ ಓರ್ವರ ಕೈಯನ್ನೇ ಕತ್ತರಿಸಿದ್ದರು. ಈ ಘಟನೆ ನಡೆದ ಒಂದು ದಿನದಲ್ಲೇ ಹೊಸ ಪ್ರಕರಣ ಜರುಗಿರುವುದು ಆತಂಕಕ್ಕೆ ಕಾರಣವಾಗಿದೆ.

ABOUT THE AUTHOR

...view details