ಕರ್ನಾಟಕ

karnataka

ETV Bharat / bharat

ಉ.ಪ್ರದೇಶದದಿಂದ ರಾಜ್ಯಕ್ಕೆ  ಬರುತ್ತಿದ್ದ 2 ಬಸ್​​ಗಳಿಗೆ ತಡೆ - Satna of Madhya Pradesh

ಉತ್ತರ ಪ್ರದೇಶದ ಕೊಸಾಂಬಿಯಿಂದ ಮಧ್ಯಪ್ರದೇಶದ ಸತ್ನಾ ಮೂಲಕ ಮೈಸೂರು ಜಿಲ್ಲೆಗೆ ಬರುತ್ತಿದ್ದ ಬಸ್​​​​​​​ಗಳನ್ನ ಸತ್ನಾದ ಸಿವಿಲ್ ಲೈನ್ ಪೊಲೀಸ್ ಠಾಣೆ ಪ್ರದೇಶದಲ್ಲಿ ತಡರಾತ್ರಿಯವರೆಗೆ ತಡೆಹಿಡಿದು ನಿಲ್ಲಿಸಲಾಗಿದೆ.

2 buses blocked in MP which was carrying 21 students from UP to Karnataka
ಉತ್ತರ ಪ್ರದೇಶದದಿಂದ 21 ವಿದ್ಯಾರ್ಥಿಗಳನ್ನು ಕರ್ನಾಟಕಕ್ಕೆ ಕೊಂಡು ಬರುತ್ತಿದ್ದ 2 ಬಸ್​ಗಳ ತಡೆ

By

Published : May 6, 2020, 1:17 PM IST

ಸತ್ನಾ(ಮಧ್ಯಪ್ರದೇಶ):ನಗರದ ಸಿವಿಲ್ ಲೈನ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಉತ್ತರ ಪ್ರದೇಶ ಸರ್ಕಾರದ ಎರಡು ಬಸ್​​​​ಗಳನ್ನ ತಡರಾತ್ರಿವರೆಗೆ ತಡೆ ಹಿಡಿದು ನಿಲ್ಲಿಸಲಾಗಿದೆ.

ಉತ್ತರ ಪ್ರದೇಶದದಿಂದ 21 ವಿದ್ಯಾರ್ಥಿಗಳನ್ನು ಕರ್ನಾಟಕಕ್ಕೆ ಕರೆದುಕೊಂಡು ಬರುತ್ತಿದ್ದ 2 ಬಸ್ ಗಳಿಗೆ ತಡೆ

ಉತ್ತರ ಪ್ರದೇಶದ ಕೊಸಾಂಬಿಯಿಂದ ಮಧ್ಯಪ್ರದೇಶದ ಸತ್ನಾ ಮೂಲಕ ಮೈಸೂರು ಜಿಲ್ಲೆಗೆ ಹೋಗುತ್ತಿದ್ದ ಬಸ್​​​​ಗಳನ್ನ ತಡೆದು ನಿಲ್ಲಿಸಲಾಗಿದೆ. ಬಸ್​​​​ನಲ್ಲಿ ಉತ್ತರ ಪ್ರದೇಶದ ನವೋದಯಕ್ಕೆ ಮೈಗರೇಶನ್​ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ 21 ಜವಾಹರ್​ ನವೋದಯ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿದ್ದರು. ಹಾಗೂ ಅವರನ್ನು ಎಸ್ಕಾರ್ಟ್​ ಮಾಡುತ್ತಿದ್ದ ಉತ್ತರ ಪ್ರದೇಶ ಪೊಲೀಸ್​ ಸಿಬ್ಬಂದಿ ಸಹ ಇದ್ದರು.

ಈ ಹಿಂದೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಿಂದ ಮೂರು ಬಸ್​​​ಗಳಲ್ಲಿ ಸುಮಾರು 104 ಜನರನ್ನು ಉತ್ತರ ಪ್ರದೇಶಕ್ಕೆ ಕಳುಹಿಸಲಾಗಿತ್ತು. ಆಗ ಉತ್ತರ ಪ್ರದೇಶ ಸರ್ಕಾರದ ಆದೇಶದ ಮೇರೆಗೆ ಚಿತ್ರಕೂಟದ ಕಲೆಕ್ಟರ್ ಅವುಗಳನ್ನು ತಡೆದಿದ್ದರು. ಇದೇ ಕಾರಣಕ್ಕೆ ಈಗ ಉತ್ತರ ಪ್ರದೇಶದ ಬಸ್​​​​ಗಳನ್ನ ತಡೆಯಲಾಗಿದೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದ ಬಸ್​​​​ಗಳು ಸಿವಿಲ್ ಲೈನ್ ಠಾಣಾ ಕ್ಷೇತ್ರ ತಲುಪಿದ ಮಾಹಿತಿ ದೊರಕುತ್ತಿದ್ದಂತೆ ಎಸ್‌ಡಿಎಂ ತಹಶೀಲ್ದಾರ್ ಮತ್ತು ಪೊಲೀಸ್ ಸಿಬ್ಬಂದಿ ಎರಡೂ ಬಸ್​​​ಗಳನ್ನ ನಿಲ್ಲಿಸಿ ಮುಂದೆ ಹೋಗದಂತೆ ತಡೆದಿದ್ದಾರೆ. ಈ ಬಗ್ಗೆ ಸತ್ನಾ ಎಸ್‌ಡಿಎಂ ಪಿಎಸ್ ತ್ರಿಪಾಠಿ ಮಾತನಾಡಿ, ತಡೆ ಹಿಡಿದಿರುವ ಎರಡೂ ಬಸ್​​ಗಳನ್ನ ಕೂಲಂಕಷ ತನಿಖೆ ನಡೆಸಲಾಗುತ್ತಿದೆ. ತನಿಖೆ ನಂತರ ಬಸ್​ ಗಳನ್ನು ಬಿಡಲು ಅನುಮತಿಸಲಾಗುವುದು ಎಂದು ತಿಳಿಸಿದ್ದಾರೆ.

ABOUT THE AUTHOR

...view details