ನವದೆಹಲಿ: 1984ರ ಸಿಖ್ ವಿರೋಧಿ ದಂಗೆಯನ್ನು ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬಿಜೆಪಿಯನ್ನು ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಪ್ರಶ್ನಿಸಿದ್ದಾರೆ. ಅಲ್ಲದೇ, ಅಂದು ದಂಗೆ ಆಗಿಹೋಯ್ತು, ಏನಿವಾಗ? ಎಂದು ಕೇಳಿರುವುದಕ್ಕೆ ಬಿಜೆಪಿ ಕೆರಳಿದೆ.
ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದ ಪಿತ್ರೋಡಾ, 1984ರ ವಿಷಯ ಈಗೇಕೆ? ಈ ಐದು ವರ್ಷಗಳಲ್ಲಿ ಏನಾಯ್ತು ಎಂಬ ಬಗ್ಗೆ ಮಾತ್ರ ಮಾತನಾಡಿ. ಅಂದು ದಂಗೆ ಆಗಿಹೋಯ್ತು. ಏನಿವಾಗ? ಎಂದು ಕೇಳಿದ್ದಾರೆ. ಗಾಂಧಿ ಕುಟುಂಬ ಐಎನ್ಎಸ್ ವಿರಾಟ್ ಯುದ್ಧನೌಕೆನ್ನು ಸ್ವಂತಕ್ಕಾಗಿ ಬಳಸಿದ್ದರು ಎಂಬ ಆರೋಪವನ್ನೂ ಅವರು ಅಲ್ಲಗಳೆದಿದ್ದಾರೆ. ಈ ಬಗ್ಗೆ ಸೇನಾ ನಾಯಕರೇ ಸತ್ಯ ಹೇಳಬೇಕೆಂದು ಹೇಳಿದ್ದಾರೆ.