ಅಮೃತಸರ: ಕೊರೊನಾ ವೈರಸ್ ಹರಡದಂತೆ ಹೇರಲಾಗಿದ್ದ ಲಾಕ್ಡೌನ್ನಿಂದಾಗಿ ಪಾಕಿಸ್ತಾನದ ಸುಮಾರು 193 ನಾಗರಿಕರು ಭಾರತದಲ್ಲಿ ಸಿಲುಕಿದ್ದರು. ಇದೀಗ ಭಾರತದಲ್ಲಿ ಸಿಲುಕಿದ್ದ ಪಾಕಿಸ್ತಾನಿಯರನ್ನು ವಾಘಾ ಗಡಿಯ ಮೂಲಕ ಮರಳಿ ಕಳುಹಿಸಲಾಗಿದೆ.
ಈ ವೇಳೆ ಮಾತನಾಡಿರುವ ಪಾಕಿಸ್ತಾನಿ ಮೂಲದ ಮಹಿಳೆ, ಭಾರತದಲ್ಲಿರುವ ಸಂಬಂಧಿಕರನ್ನು ಭೇಟಿಯಾಗಲು ಬಂದಿದ್ದೆವು. ಇಲ್ಲಿ ಧಾರ್ಮಿಕ ಆಚರಣೆಯಲ್ಲಿ ಭಾಗಿಯಾಗಿದ್ದೆವು ಎಂದಿದ್ದಾರೆ.
ಸೋಮವಾರ ಸಂಜೆಯ ವೇಳೆಯೇ ವಾಘಾ ಗಡಿಯ ಬಳಿ ತಲುಪಿದ ಪಾಕಿಸ್ತಾನಿಯರನ್ನು ಬೆಳಗ್ಗೆ ಗಡಿ ಭದ್ರತಾ ಪಡೆ ಸಿಬ್ಬಂದಿ ಪಾಕಿಸ್ತಾನಕ್ಕೆ ತಲುಪಿಸಿದ್ದಾರೆ. ಇನ್ನು ಇದೇ ತಿಂಗಳ ಆರಂಭದಲ್ಲಿ ಸುಮಾರು 41 ಪಾಕ್ ನಾಗರಿಕರು ವಾಘಾ ಗಡಿಯ ಮೂಲಕ ತಮ್ಮ ತಾಯ್ನಾಡಿಗೆ ತಲುಪಿದ್ದರು. ಇದೀಗ 193 ಮಂದಿ ಮರಳಿ ಪಾಕಿಸ್ತಾನ ತಲುಪಿದ್ದಾರೆ.