ಕರ್ನಾಟಕ

karnataka

By

Published : Aug 3, 2019, 4:59 PM IST

ETV Bharat / bharat

ಹುಟ್ಟುಹಬ್ಬದ ದಿನವೇ ಯುವತಿ ಮೇಲೆ ಅತ್ಯಾಚಾರ! ನಾಲ್ವರ ವಿರುದ್ಧ ಪ್ರಕರಣ

ಹುಟ್ಟುಹಬ್ಬದ ದಿನವೇ ಯುವತಿ ಮೇಲೆ ಅತ್ಯಾಚಾರ ನಡೆಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಯುವತಿ ಮೇಲೆ ಅತ್ಯಾಚಾರ

ಮುಂಬೈ:ಗೆಳೆಯರೊಂದಿಗೆ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ​ ವೇಳೆ ಯುವತಿಯೋರ್ವಳ ಮೇಲೆ ನಾಲ್ವರು ಕಾಮುಕರು ಅತ್ಯಾಚಾರಗೈದಿರುವ ಘಟನೆ ಮಹಾರಾಷ್ಟ್ರದ ಚೆಂಬೂರ್​​ ಪ್ರದೇಶದಲ್ಲಿ ನಡೆದಿದೆ.

ಜುಲೈ 7ರಂದು ಗೆಳೆಯರ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಯುವತಿ ನಂತರ ಮನೆಗೆ ವಾಪಸ್​ ಆಗುತ್ತಿದ್ದಳು. ಈ ಸಂದರ್ಭದಲ್ಲಿ ಘಟನೆ ನಡೆದಿದೆ. ಒಂದು ವಾರ ಕಳೆದರೂ ಯುವತಿ ತನ್ನ ಮೇಲೆ ನಡೆದಿರುವ ಅತ್ಯಾಚಾರದ ಬಗ್ಗೆ ಯಾರಿಗೂ ಮಾಹಿತಿ ನೀಡಿರಲಿಲ್ಲ. ಆದರೆ ಆಕೆಯ ಆರೋಗ್ಯದಲ್ಲಿ ಏರುಪೇರಾದ ಕಾರಣ ಕುಟುಂಬಸ್ಥರು ಅರುನಾಗ್​ಬಾದ್​​ ಆಸ್ಪತ್ರೆಗೆ ದಾಖಲು ಮಾಡಿದಾಗ ವೈದ್ಯರು ನಿಜಾಂಶ ತಿಳಿಸಿದ್ದಾರೆ.

ಇದೀಗ ಸಂತ್ರಸ್ತ ಯುವತಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ದೇಹದ ಕೆಲ ಭಾಗಗಳಲ್ಲಿ ಗಾಯಗಳಾಗಿರುವ ಮಾಹಿತಿಯನ್ನು ವೈದ್ಯರು ನೀಡಿದ್ದಾರೆ.

ಪೋಷಕರು ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್​​ 376 (​ಅತ್ಯಾಚಾರ) 376ಡಿ (ಸಾಮೂಹಿಕ ಅತ್ಯಾಚಾರ) ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details