ಕರ್ನಾಟಕ

karnataka

ETV Bharat / bharat

ಸಂಕ್ರಾಂತಿ ಪವಿತ್ರ ಸ್ನಾನಕ್ಕೆ ತೆರಳಿದ ಯುವತಿ ಮೇಲೆ ಗ್ಯಾಂಗ್​ರೇಪ್​! ಆರೋಪಿಗಳಲ್ಲೊಬ್ಬ ಅಪ್ರಾಪ್ತ! - ಒಡಿಶಾದಲ್ಲಿ ಯುವತಿ ಮೇಲೆ ರೇಪ್​

ಸಂಕ್ರಾಂತಿ ಹಬ್ಬದ ಪ್ರಯುಕ್ತ ಪವಿತ್ರ ಸ್ನಾನಕ್ಕಾಗಿ ತೆರಳುತ್ತಿದ್ದ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಪ್ರಕರಣ ದಾಖಲಾಗಿದೆ.

gang-raped in Odisha
gang-raped in Odisha

By

Published : Jan 14, 2021, 7:13 PM IST

ಭುವನೇಶ್ವರ(ಒಡಿಶಾ): ಮಕರ ಸಂಕ್ರಾಂತಿ ಕಾರಣ ಪವಿತ್ರ ಸ್ನಾನಕ್ಕಾಗಿ ತೆರಳುತ್ತಿದ್ದ 19 ವರ್ಷದ ಯುವತಿ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

ಒಡಿಶಾದ ಬರಿಪದ ಪಟ್ಟಣದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಬಾಲಕಿ ದೂರು ದಾಖಲು ಮಾಡಿರುವ ಆಧಾರದ ಮೇಲೆ ಇಬ್ಬರ ಬಂಧನ ಮಾಡಲಾಗಿದೆ. ಅದರಲ್ಲಿ ಓರ್ವ ಅಪ್ರಾಪ್ತ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬರಿಪದ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​​ ಮಾಹಿತಿ ನೀಡಿದ್ದು, ಬಾಲಕಿ ಸ್ನಾನಕ್ಕಾಗಿ ನದಿಗೆ ತೆರಳುತ್ತಿದ್ದ ವೇಳೆ ಇಬ್ಬರು ಯುವಕರು ಆಕೆಯ ಮೇಲೆ ಎರಗಿ ದುಷ್ಕೃತ್ಯವೆಸಗಿದ್ದಾರೆ. ಅಲ್ಲಿಂದ ಆಕೆ ತಪ್ಪಿಸಿಕೊಂಡು ಮನೆಗೆ ತೆರಳಿದ್ದು, ತದನಂತರ ಸಹೋದರಿ ಸಹಾಯದಿಂದ ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದಾಳೆ ಎಂದು ಹೇಳಿದ್ದಾರೆ.

ABOUT THE AUTHOR

...view details