ನವದೆಹಲಿ:ಮಹಾಮಾರಿ ಕೋವಿಡ್ -19 ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಇದರ ವಿರುದ್ಧ ಹೋರಾಟಲೂ ಕೇಂದ್ರ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ಇದೀಗ ಮಧ್ಯರಾತ್ರಿಯಿಂದಲೇ ದೇಶೀಯ ವಿಮಾನಯಾನ ಸಂಪೂರ್ಣವಾಗಿ ರದ್ದು ಮಾಡಿ ವಿಮಾನಯಾನ ಇಲಾಖೆ ಮಹತ್ವದ ಆದೇಶ ಹೊರಹಾಕಿದೆ.
ಮಹಾಮಾರಿ ಕೊರೊನಾ ಹೆಚ್ಚಾಗಿ ಕಾಣಿಸಿಕೊಂಡಿರುವ 19 ರಾಜ್ಯಗಳನ್ನ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಭಾರತದಲ್ಲಿ ಇಲ್ಲಿಯವರೆಗೆ 415 ಕೇಸ್ ಕಂಡು ಬಂದಿದ್ದು, 23 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಏಳು ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಅಗರ್ವಾಲ್ ತಿಳಿಸಿದ್ದಾರೆ.