ಇಂದೋರ್(ಮಧ್ಯಪ್ರದೇಶ): ತಾತ್ಕಾಲಿಕವಾಗಿ ಜೈಲಿನಲ್ಲಿ ಇರಿಸಲಾಗಿದ್ದ ಇಂದೋರ್ನ ಕೇಂದ್ರ ಕಾರಾಗೃಹದ 19 ಕೈದಿಗಳಿಗೆ ಕೊರೊನಾ ಸೋಂಕು ತಗುಲಿರುವುದಾಗಿ ಇಂದೋರ್ನ ಆರೋಗ್ಯಾಧಿಕಾರಿ ಪ್ರವೀಣ್ ಜಾಡಿಯಾ ಮಾಹಿತಿ ನೀಡಿದ್ದಾರೆ.
ಇಂದೋರ್ ಕೇಂದ್ರ ಕಾರಾಗೃಹದ 19 ಕೈದಿಗಳಿಗೆ ಕೊರೊನಾ ಪಾಸಿಟಿವ್! - ಇಂದೋರ್ನ ಕೇಂದ್ರ ಕಾರಾಗೃಹ
ಮಧ್ಯ ಪ್ರದೇಶದ ಇಂದೋರ್ನ ಕೇಂದ್ರ ಕಾರಾಗೃಹದ 19 ಕೈದಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕೈದಿಗಳಿಗೆ ಕೊರೊನಾ ಪಾಸಿಟಿವ್
ಈ ಮೊದಲು ಆರು ಕೈದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಅವರನ್ನು MRTB ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಹೀಗಾಗಿ ಮುಂಜಾಗ್ರತ ಕ್ರಮವಾಗಿ 250 ಕೈದಿಗಳನ್ನು ತಾತ್ಕಾಲಿಕ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಇದೀಗ ಮತ್ತೆ 13 ಮಂದಿಗೆ ಕೋವಿಡ್-19 ಇರುವುದು ದೃಢಪಟ್ಟಿದೆ. ಒಟ್ಟು ಇಂದೋರ್ ಸೆಂಟ್ರಲ್ ಜೈಲ್ನ 19 ಕೈದಿಗಳಿಗೆ ಸೋಂಕು ತಗುಲಿದಂತಾಗಿದೆ.