ಪುಣೆ: ಧೂಮಪಾನ ಮಾಡುವಂತೆ ರೂಮ್‌ಮೇಟ್ ಒತ್ತಾಯಿಸುತ್ತಿದ್ದರಿಂದ ಮನ ನೊಂದು 18 ವರ್ಷದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಸಿಗರೇಟ್ ಸೇದುವಂತೆ ರೂಮ್ಮೇಟ್ನಿಂದ ಒತ್ತಾಯ: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ - ಧೂಮಪಾನಕ್ಕೆ ಒತ್ತಾಯಿಸಿದ್ದಕ್ಕೆ ಯುವಕ ಆತ್ಮಹತ್ಯೆ
ಸಿಗರೇಟ್ ಸೇದುವಂತೆ ರೂಮ್‌ಮೇಟ್ ಒತ್ತಾಯಿಸುತ್ತಿದ್ದರಿಂದ ಮನ ನೊಂದು 18 ವರ್ಷದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಕ್ಟೋಬರ್ 10ರಿಂದ 13ರ ನಡುವೆ ಕಾರ್ವೆ ನಗರದ ಬಾಲಕರ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ಸಾಗರ್ ಅಶೋಕ್ ಪವಾರ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಈ ಪ್ರಕರಣದಲ್ಲಿ ವಾರ್ಜೆ ಮಾಲ್ವಾಡಿ ಪೊಲೀಸರು ಲಕ್ಷ್ಮಣ್ ವಾಸುದೇವ್ ಪಾಟೀಲ್ (30) ಎಂಬಾತನನ್ನು ಬಂಧಿಸಿದ್ದಾರೆ.
ಸಾಗರ್ ಪವಾರ್ ಮೂರು ನಾಲ್ಕು ದಿನಗಳ ಹಿಂದೆ ಕಾರ್ವೆ ನಗರ ಪ್ರದೇಶದ ಪಠಾಣ್ ಹಾಸ್ಟೆಲ್‌ನಲ್ಲಿ ಉಳಿಯಲು ಬಂದಿದ್ದ. ಆತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ತನ್ನ ರೂಮ್‌ಮೇಟ್ ಆಗಿದ್ದ ಲಕ್ಷ್ಮಣ ಪಾಟೀಲ್ ಸಿಗರೇಟ್ ವ್ಯಸನಿಯಾಗಿದ್ದ. ಸಾಗರ್‌ನನ್ನೂ ಧೂಮಪಾನ ಮಾಡುವಂತೆ ಒತ್ತಾಯಿಸುತ್ತಿದ್ದನಂತೆ. ನಿರಾಕರಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಸಾಗರ್, ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಲಕ್ಷ್ಮಣ್ ಪಾಟೀಲ್ನನ್ನು ಪೊಲೀಸರು ಬಂಧಿಸಿದ್ದಾರೆ.