ಸುರೇಂದ್ರನಗರ (ಗುಜರಾತ್):ಪಾಟಿದಾರ್ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಮೇಲೆ ವ್ಯಕ್ತಿವೋರ್ವ ಹಲ್ಲೆ ಮಾಡಿರುವ ಘಟನೆ ಸಂಬಂಧಿಸಿದಂತೆ ಕಪಾಳಮೋಕ್ಷ ಮಾಡಿರುವ ವ್ಯಕ್ತಿ ಸ್ಪಷ್ಟನೆ ನೀಡಿದ್ದಾನೆ.
ಪಾಟಿದಾರ್ ಸಮುದಾಯಕ್ಕಾಗಿ ಹಾರ್ದಿಕ್ ಪಟೇಲ್ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ನನ್ನ ಪತ್ನಿಯ ಆರೋಗ್ಯ ತಪಾಸಣೆ ನಡೆಯುತ್ತಿತ್ತು. ಹಾರ್ದಿಕ್ ಪಟೇಲರ ಹೋರಾಟದಿಂದ ಪತ್ನಿಯ ಆರೋಗ್ಯ ತಪಾಸಣೆ ತುಂಬಾ ಕಷ್ಟವಾಯಿತು.
ಹೆಚ್ಚಿನ ಓದಿಗಾಗಿ:
ಸಾರ್ವಜನಿಕ ಸಭೆಯಲ್ಲಿ ಹಾರ್ದಿಕ್ ಪಟೇಲ್ಗೆ ಕಪಾಳಮೋಕ್ಷ... ವಿಡಿಯೋ ವೈರಲ್
ಅಹಮದಾಬಾದ್ನಲ್ಲಿ ಸಾರ್ವಜನಿಕ ಸಮ್ಮೇಳನದ ವೇಳೆ ನನ್ನ ಮಗುವಿಗೆ ಔಷಧ ತರಲು ತೆರಳಿದ್ದೆ, ಆದರೆ ಸಂಪೂರ್ಣ ಪಟ್ಟಣ ಸಮ್ಮೇಳನದ ನಿಮಿತ್ತ ಎಲ್ಲ ಮೆಡಿಕಲ್ ಶಾಪ್ ಹಾಗೂ ಅಂಗಡಿ- ಮುಂಗಟ್ಟುಗಳು ಬಂದ್ ಆಗಿದ್ದವು. ಇಷ್ಟೆಲ್ಲ ಸಮಸ್ಯೆ ಎದುರಾದ ಕಾರಣದಿಂದ ಹಾರ್ದಿಕ್ ಪಟೇಲ್ರಿಗೆ ಕಪಾಳಮೋಕ್ಷ ಮಾಡುವ ನಿರ್ಧಾರಕ್ಕೆ ಬಂದೆ ಎಂದು ಸ್ಪಷ್ಟನೆ ನೀಡಿದ್ದಾನೆ.