ಕರ್ನಾಟಕ

karnataka

ETV Bharat / bharat

ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಇಂದಿಗೆ ವರ್ಷ: 178 ಉಗ್ರರು ಮಟಾಷ್​ - ವಾರ್ಷಿಕೋತ್ಸವ

ರಾಜ್ಯವಾಗಿದ್ದ ಹಾಗೂ ವಿಶೇಷಾಧಿಕಾರ ಪಡೆದಿದ್ದ ಕಾಶ್ಮೀರ ಈಗ ಕೇಂದ್ರಾಡಳಿತ ಪ್ರದೇಶವಷ್ಟೇ. ಜಮ್ಮು- ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಆದ ಬಳಿಕ ಸೇನೆ ತನ್ನ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಒಂದು ವರ್ಷದ ಅವಧಿಯಲ್ಲಿ ಸುಮಾರು 178 ಉಗ್ರರನ್ನ ಕೊಂದು ಹಾಕಲಾಗಿದೆ.

178 militants killed in JK
178 ಉಗ್ರರು ಹತ

By

Published : Aug 5, 2020, 6:50 AM IST

ಶ್ರೀನಗರ (ಜಮ್ಮು -ಕಾಶ್ಮೀರ):ಸಂವಿಧಾನದ 370 ನೇ ವಿಧಿ ರದ್ದು ಮಾಡಿ, ಜಮ್ಮು- ಕಾಶ್ಮೀರವನ್ನ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿ ಇಂದಿಗೆ ಒಂದು ವರ್ಷ ತುಂಬಿದೆ.

ರಾಜ್ಯವಾಗಿದ್ದ ಹಾಗೂ ವಿಶೇಷಾಧಿಕಾರ ಪಡೆದಿದ್ದ ಕಾಶ್ಮೀರ ಈಗ ಕೇಂದ್ರಾಡಳಿತ ಪ್ರದೇಶವಷ್ಟೇ. ಜಮ್ಮು- ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಆದ ಬಳಿಕ ಸೇನೆ ತನ್ನ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಒಂದು ವರ್ಷದ ಅವಧಿಯಲ್ಲಿ ಸುಮಾರು 178 ಉಗ್ರರನ್ನ ಕೊಂದು ಹಾಕಲಾಗಿದೆ.

ಅಂಕಿ-ಅಂಶಗಳ ಪ್ರಕಾರ, 2019ರ ಆಗಸ್ಟ್ 5 ಮತ್ತು 2020ರ ಜುಲೈ 23ರ ಅವಧಿಯ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 112 ಹಿಂಸಾಚಾರ ಘಟನೆಗಳು ನಡೆದಿವೆ. ಇದುವರೆಗೆ 178 ಉಗ್ರರನ್ನ ಹೊಡೆದುರುಳಿಸಿದರೆ, ಸುಮಾರು 39 ಭದ್ರತಾ ಸಿಬ್ಬಂದಿ ಸಹ ವೀರಮರಣವನ್ನಪ್ಪಿದ್ದಾರೆ.

ವರ್ಷದ ಕಾರ್ಯಾಚರಣೆ

ಇದೇ ವೇಳೆ 36 ನಾಗರಿಕರು ತಮ್ಮ ಪ್ರಾಣವನ್ನ ಅರ್ಪಣೆ ಮಾಡಿದ್ದಾರೆ. ಸೇನೆ ನಡೆಸಿದ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ, 50 ಎಕೆ -47 ರೈಫಲ್‌ಗಳು ಸೇರಿದಂತೆ 77 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 2019ರ ಆಗಸ್ಟ್ 5ರ ನಂತರ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿ 400 ಪ್ರಕರಣಗಳು ದಾಖಲಾಗಿದ್ದರೆ, ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಅಡಿ ಸುಮಾರು 300 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

...view details