ತಿರುಚಿರಾಪಳ್ಳಿ(ತಮಿಳುನಾಡು):ಭಾರತ ಸರ್ಕಾರದ ಅತಿ ದೊಡ್ಡ ಏರ್ಲಿಫ್ಟ್ ಕಾರ್ಯಾಚರಣೆ ವಂದೇ ಭಾರತ್ ಮಿಷನ್ ಅಡಿಯಲ್ಲಿ ಮಲೇಷ್ಯಾದ ಕೌಲಲಾಂಪುರದಿಂದ 177 ಭಾರತೀಯರನ್ನ ತಮಿಳುನಾಡಿನ ತಿರುಚಿರಾಪಳ್ಳಿಗೆ ಕರೆತರಲಾಗಿದೆ.
ಮಲೇಷ್ಯಾದಿಂದ ತಮಿಳುನಾಡಿಗೆ 177 ಮಂದಿ ವಾಪಸ್, ಏರ್ಪೋರ್ಟ್ನಿಂದ ಕ್ವಾರಂಟೈನ್ಗೆ ಪಯಣ - ತಿರುಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಮಲೇಷ್ಯಾದ ಕೌಲಲಾಂಪುರದಿಂದ ಭಾರತೀಯರನ್ನು ತಮಿಳುನಾಡಿನ ತಿರುಚಿರಾಪಳ್ಳಿಗೆ ಕರೆತರಲಾಗಿದ್ದು, ಏಪೋರ್ಟ್ನಲ್ಲೇ ಪ್ರಯಾಣಿಕರನ್ನು ಪರೀಕ್ಷಿಸಿ, ನಂತರ ಕ್ವಾರಂಟೈನ್ ಕೇಂದ್ರಗಳಿಗೆ ಕರೆದೊಯ್ಯಲಾಗಿದೆ.
ಮಲೇಷ್ಯಾದಿಂದ ಹೊರಟ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ನಿನ್ನೆ ರಾತ್ರಿ 10:20ಕ್ಕೆ ತಿರುಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಏಪೋರ್ಟ್ನಲ್ಲೇ ಪ್ರಯಾಣಿಕರನ್ನ ಪರೀಕ್ಷಿಸಿದ ನಂತರ ಅವರನ್ನು ಕ್ವಾರಂಟೈನ್ ಕೇಂದ್ರಗಳಿಗೆ ಕರೆದೊಯ್ಯಲಾಗಿದೆ. ಇನ್ನು, ಜಿಲ್ಲಾಡಳಿತ ಸಾರಿಗೆ ವೆಚ್ಚವನ್ನು ಭರಿಸಲಿದ್ದು, ಹೋಟೆಲ್ಗಳಲ್ಲಿ ಉಳಿದುಕೊಳ್ಳಲು ತಗಲುವ ವೆಚ್ಚವನ್ನು ಪ್ರಯಾಣಿಕರು ಭರಿಸಬೇಕಿದೆ.
ಕೋವಿಡ್-19 ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರುವ ಸಲುವಾಗಿ ಸರ್ಕಾರ ವಂದೇ ಭಾರತ್ ಮಿಷನ್ ಪ್ರಾರಂಭಿಸಿದೆ.