ಕೃಷ್ಣಗಿರಿ(ತಮಿಳುನಾಡು):ಕೇಳಿದ ತಕ್ಷಣ ಬೆಂಕಿ ಪೊಟ್ಟಣ ನೀಡಲಿಲ್ಲ ಎಂದು ಆಕ್ರೋಶಗೊಂಡ ವ್ಯಕ್ತಿಯೋರ್ವ 22 ವರ್ಷದ ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 21ರಂದು ಈ ಘಟನೆ ನಡೆದಿದೆ. ಕಂಠಪೂರ್ತಿ ಕುಡಿದಿದ್ದ 17 ವರ್ಷದ ಬಾಲಕ ತನ್ನ ಸಂಬಂಧಿ ಮನೆಗೆ ತೆರಳಿ ಬೀಡಿ ಸೇದಲು ಮ್ಯಾಚ್ ಬಾಕ್ಸ್ ನೀಡುವಂತೆ ಕೇಳಿದ್ದಾನೆ. ಆದರೆ ಮಹಿಳೆ ಬೆಂಕಿ ಪೊಟ್ಟಣ ಕೊಡಲು ನಿರಾಕರಿಸಿದ್ದಾಳೆ.