ಹೈದರಾಬಾದ್: ಪ್ರೀತಿ ಮಾಡಲು ನಿರಾಕರಣೆ ಮಾಡಿರುವ 17 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿರುವ ದುಷ್ಕರ್ಮಿಯೊಬ್ಬ ತದನಂತರ ಬೆಂಕಿ ಹಚ್ಚಿರುವ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ.
ತೆಲಂಗಾಣದ ಸೂರ್ಯಪೇಟೆಯಲ್ಲಿ ಈ ಘಟನೆ ನಡೆದಿದ್ದು, ಯುವತಿಗೆ 21 ವರ್ಷದ ಯುವಕನೊಬ್ಬ ಪ್ರಪೋಸ್ ಮಾಡಿದ್ದಾನೆ. ಈ ವೇಳೆ, ಆಕೆ ನಿರಾಕರಣೆ ಮಾಡಿದ್ದರಿಂದ ಆಕ್ರೋಶಗೊಂಡ ವ್ಯಕ್ತಿ ಈ ಕೃತ್ಯವೆಸಗಿದ್ದಾನೆ. ಘಟನೆಯಿಂದ ಶೇ.50ರಷ್ಟು ಸುಟ್ಟು ಹೋಗಿರುವ ಯುವತಿ ವರಂಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ.