ಈರೋಡ್(ತಮಿಳುನಾಡು):ಸುಮಾರು ಆರು ಗಂಟೆಗಳ ಕಾಲ ನಿರಂತರವಾಗಿ ಪಬ್ ಜಿ(PUBG) ಆಟವಾಡುತ್ತಿದ್ದ 16 ವರ್ಷದ ಬಾಲಕ ಹೃದಯ ಸ್ತಂಭನದಿಂದ ಸಾವಿಗೀಡಾದ ಘಟನೆ ತಮಿಳುನಾಡಿನ ಈರೋಡ್ ಪಟ್ಟಣದಲ್ಲಿ ನಡೆದಿದೆ.
PUBG ಗೇಮ್ ಒತ್ತಡ: ಹೃದಯ ಸ್ತಂಭನದಿಂದ 16 ವರ್ಷದ ಬಾಲಕ ಸಾವು - ಸ್ತಂಭನದಿಂದ 16 ವರ್ಷದ ಬಾಲಕ ಸಾವು
ತಮಿಳುನಾಡಿನಲ್ಲಿ 16 ವರ್ಷದ ಬಾಲಕ ಪಬ್ ಜಿ ವಿಡಿಯೋ ಗೇಮ್ ಆಡುತ್ತಿದ್ದ ವೇಳೆ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾನೆ.
ಮೃತ ಬಾಕಲಕನ್ನು 11ನೇ ತರಗತಿ ವಿದ್ಯಾರ್ಥಿ ಸತೀಶ್ ಕುಮಾರ್ ಎಂದು ಗುರುತಿಸಲಾಗಿದೆ. ಊಟ ಮುಗಿಸಿದ ನಂತರ ಬಾಲಕ ವಿಡಿಯೋ ಗೇಮ್ ಆಡಲು ಪ್ರಾರಂಭಿಸಿದ್ದಾನೆ. ಆತ ನೆಲಕ್ಕೆ ಕುಸಿದು ಬೀಳುವ ಮೊದಲು ಆಕ್ರೋಶದಿಂದ ಇತರೆ ಆಟಗಾರರ ಮೇಲೆ ಕೂಗಾಡುತ್ತಿದ್ದ ಎಂದು ಆತನ ಕುಟುಂಬಸ್ಥರು ತಿಳಿಸಿದ್ದಾರೆ.
ಘಟನೆಯ ನಂತರ ಸತೀಶ್ನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಆಟವಾಡುವ ಉತ್ಸಾಹದಲ್ಲಿ ಒತ್ತಡಕ್ಕೆ ಸಿಲುಕಿ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು. ತೀವ್ರ ಒತ್ತಡ ಮತ್ತು ಅನಾರೋಗ್ಯಕ್ಕೆ ಕಾರಣವಾಗುವಂತಹ ಅಟಗಳಿಂದ ಮಕ್ಕಳು ದೂರವಿರಬೇಕೆಂದು ಮನವಿ ಮಾಡುತ್ತೇನೆ ಎಂದು ಬಾಲಕ ಸತೀಶ್ನನ್ನು ಪರೀಕ್ಷಿಸಿದ ವೈದ್ಯರು ಹೇಳಿದ್ದಾರೆ.