ನವದೆಹಲಿ:ರಸ್ತೆಯಲ್ಲಿ ಇಟ್ಟಿಗೆ ಇಡುವ ವಿಚಾರಕ್ಕೆ ಜಗಳ ನಡೆದು 16 ವರ್ಷದ ಬಾಲಕನನ್ನು ಇರಿದು ಕೊಂದ ಘಟನೆ ದಕ್ಷಿಣ ದೆಹಲಿಯ ಸಂಗಮ್ ವಿಹಾರ್ನಲ್ಲಿ ನಡೆದಿದೆ.
ಇಟ್ಟಿಗೆ ಇಡುವ ವಿಚಾರದಲ್ಲಿ ಜಗಳ: ಬಾಲಕನನ್ನು ಇರಿದು ಕೊಂದ ಯುವಕ - teen stabbed to death in Delhi
ಕ್ಷುಲ್ಲಕ ವಿಷಯಕ್ಕೆ ಜಗಳ ನಡೆದು ಯುವಕನೊಬ್ಬ ಬಾಲಕನನ್ನು ಇರಿದು ಕೊಂದ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

ಬಾಲಕನ್ನು ಇರಿದು ಕೊಂದ ಯುವಕ
ಘಟನೆ ನಡೆದ ತಕ್ಷಣ ಬಾಲಕನ್ನು ಸ್ಥಳೀಯ ಮಜೀದಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತನ ಸಹೋದರನ ಹೇಳಿಕೆ ಮೇರೆಗೆ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಅತುಲ್ ಕುಮಾರ್ ಠಾಕೂರ್ ಹೇಳಿದ್ದಾರೆ.
ಕೊಲೆ ಆರೋಪಿಯನ್ನು ಫಾರೂಕ್ (22) ಎಂದು ಗುರುತಿಸಲಾಗಿದೆ. ಕೃತ್ಯದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸಂಗಮ್ ವಿಹಾರ್ ಮತ್ತು ದೇವ್ಲಿ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಯ ಗುರುತು ಪತ್ತೆ ಹಚ್ಚಿದ್ದಾರೆ. ಸದ್ಯ, ಆರೋಪಿ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.