ಹೈದರಾಬಾದ್:ಮಹಾತ್ಮ ಗಾಂಧೀಜಿಯ 150ನೇ ಹುಟ್ಟುಹಬ್ಬ ಹಾಗೂ 70ನೇ ವಾರ್ಷಿಕೋತ್ಸವ ಆಚರಿಸಲು ಅಣಿಯಾಗುತ್ತಿದೆ. ಈ ಸಂದರ್ಭದಲ್ಲಿ ಸಾವಿನ ಬಗ್ಗೆ ಗಾಂಧೀಜಿಯವರ ನಿಲುವನ್ನ ತಿಳಿದುಕೊಳ್ಳೋದು ಉಚಿತವಾಗಿದೆ.
ಗಾಂಧೀಜಿಯವರು ಬರೆಯದ ಅಥವಾ ಮಾತನಾಡದ ವಿಚಾರಗಳು ತೀರ ಕಡಿಮೆ ಎನ್ನಬಹುದು. ವಿಶೇಷ ಅಂದ್ರೆ ಬಾಪೂ ಸಾವಿನ ಕುರಿತ ತಮ್ಮ ನಿಲುವನ್ನೂ ಸಹ ಸವಿಸ್ತಾರವಾಗಿ ಹಂಚಿಕೊಂಡಿದ್ದರು. ತಮ್ಮ ರಾಜಕೀಯ ಜೀವನದುದ್ದಕ್ಕೂ ಗಾಂಧಿ, ಧೈರ್ಯ, ನಿರ್ಭಯದಂತಹ ವಿಚಾರಗಳಿಗೆ ಹೆಚ್ಚು ಒತ್ತು ನೀಡಿದ್ದರು. ನಿರ್ಭಯ, ಅವರನ್ನ ಎಲ್ಲ ರೀತಿಯ ಭೀತಿಗಳಿಂದ ದೂರವಿರಿಸಿತ್ತು. ಈ ಸಂಬಂಧ ಅವರ "ಸೌತ್ ಆಫ್ರಿಕಾದಲ್ಲಿ ಸತ್ಯಾಗ್ರಹ" ಎಂಬ ಪುಸ್ತಕದಲ್ಲಿ ಗಾಂಧೀಜಿ, ಸರ್ವಶಕ್ತನಲ್ಲಿ ಸಂಪೂರ್ಣ ನಂಬಿಕೆಯಿಡಿ ಎಂಬ ವಿಚಾರವನ್ನ ಉಲ್ಲೇಖಿಸುವ ಮೂಲಕ ನಿರ್ಭಯದಿಂದಿರಿ ಎನ್ನುವ ಸಂದೇಶ ಸಾರಿದ್ದರು.
ತಮ್ಮ ದಕ್ಷಿಣ ಆಫ್ರಿಕಾ ದಿನಗಳಲ್ಲಿ ಸಾವು - ಬದುಕಿನ ಬಗೆಗಿನ ಸಂಬಂಧವನ್ನ ಸವಿಸ್ತಾರವಾಗಿ ವ್ಯಾಖ್ಯಾನಿಸಿದ್ದಾರೆ ಬಾಪೂ. ಪ್ರತಿಯೊಬ್ಬನೂ, ತನ್ನಿಂದ ಹಲವು ಸಮಯದಿಂದ ಬೇರ್ಪಟ್ಟ ಸ್ನೇಹಿತನನ್ನು ಒಂದೊಮ್ಮೆ ನೋಡಲೇಬೇಕಾಗುತ್ತದೆ ಎಂದೂ ಹೇಳಿರುವ ಅವರು ಈ ಮೂಲಕ ಅವರು ಸಾವು ಕಾಲಗಳಿಂದ ಬೇರ್ಪಟ್ಟ ಗೆಳೆಯ ಎಂದು ಬಣ್ಣಿಸಿದ್ದಾರೆ. ಅಷ್ಟೇಅಲ್ಲ, ಸಾವು ಸ್ನೇಹಿತ ಮಾತ್ರವಲ್ಲ ನಮ್ಮ ಪ್ರೀತಿಯ ಒಡನಾಡಿ ಕೂಡ ಹೌದು, ಎಂದು 30ರ ಡಿಸೆಂಬರ್ 1926ರಂದು ಯಂಗ್ ಇಂಡಿಯಾದಲ್ಲಿ ಲೇಖನ ಬರೆದಿದ್ದರು.