ಕರ್ನಾಟಕ

karnataka

ETV Bharat / bharat

ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ: ಆರೋಪಿ ಸ್ಥಾನದಲ್ಲಿದ್ದ ಹುಡುಗನ ಹತ್ಯೆ - undefined

15 ವರ್ಷದ ಹುಡುಗನೊಬ್ಬ ಗೆಳೆಯರೊಂದಿಗೆ ಸೇರಿ ತಮ್ಮ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಸಂತ್ರಸ್ತೆ ಪೋಷಕರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಹುಡುಗಿಯ ಮನೆಯವರು ತಮ್ಮ ಮಗನನ್ನು ಹೊಡೆದು ಕೊಂದಿದ್ದಾರೆ ಎಂದು ಬಾಲಕನ ಕುಟುಂಬ ಪೊಲೀಸರಿಗೆ ದೂರು ನೀಡಿದೆ.

ಬಾಲಕ

By

Published : May 18, 2019, 11:56 PM IST

ಜೈಪುರ:ಅಲ್ವಾರ್​ ಸಾಮೂಹಿಕ ಅತ್ಯಾಚಾರ ಪ್ರಕರಣ ಹಸಿರಾಗಿರುವಾಗಲೇ ಅಪ್ರಾಪ್ತನೊಬ್ಬ ತನ್ನದೇ ವಯಸ್ಸಿನ ಹುಡುಗಿ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಹಲ್ಲೆ ನಡೆಸಿ, ಕೊಲೆ ಮಾಡಿರುವ ಘಟನೆ ವರದಿಯಾಗಿದೆ.

ಅಲ್ವಾರ್​ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. 15 ವರ್ಷದ ಹುಡುಗನೊಬ್ಬ ಗೆಳೆಯರೊಂದಿಗೆ ಸೇರಿ ತಮ್ಮ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಸಂತ್ರಸ್ತೆ ಪೋಷಕರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಹುಡುಗಿಯ ಮನೆಯವರು ತಮ್ಮ ಮಗನನ್ನು ಹೊಡೆದು ಹತ್ಯೆ ಮಾಡಿದ್ದಾರೆ ಎಂದು ಬಾಲಕನ ಕುಟುಂಬ ದೂರು ನೀಡಿದೆ ಎಂದು ಎಸ್​ಪಿ ಪರೀಶ್​ ಅನಿಲ್ ದೇಶ್​ಮುಖ್​ ಮಾಹಿತಿ ನೀಡಿದ್ದಾರೆ.

ಹರ್ನಾಸ್​ ಕಿ ಧಾನಿ ಎಂಬಲ್ಲಿ ತಮ್ಮ ಮಗ ಸಂಬಂಧಿಕರ ಮದುವೆಗೆ ತೆರಳಿದ್ದಾಗ ಈ ಹುಡುಗಿ ಕಡೆಯವರು ಹೊಡೆದು, ಕೊಲೆ ಮಾಡಿದ್ದಾರೆ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ. ಆದರೆ ಸಂತ್ರಸ್ತೆ ಕುಟುಂಬ, ಇದೇ ಮದುವೆ ಸಂದರ್ಭದಲ್ಲಿ ಈ ಬಾಲಕ ಹಾಗೂ ಮತ್ತವನ ಇಬ್ಬರು ಸ್ನೇಹಿತರು ತಮ್ಮ ಮಗಳನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದಾರೆ. ಈ ಮೂವರೊಂದಿಗೆ ತಮ್ಮ ಮಗಳು ಪತ್ತೆಯಾದಾಗ ಒಬ್ಬ ಆರೋಪಿ ಸಿಕ್ಕಿಬಿದ್ದು, ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ ಎಂದಿದ್ದಾರೆ.

ಪ್ರಕರಣದ ಸಂಬಂಧ ಮೃತ ಬಾಲಕನ ಹೊರತಾಗಿ ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿ,ಕೋರ್ಟ್​ ಮುಂದೆ ಹಾಜರುಪಡಿಸಿದ್ದಾರೆ. ಸದ್ಯ ಅವರಿಬ್ಬರು ಬಾಲಾಪರಾಧಿಗಳ ಕಾರಾಗೃಹದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ವಾರ್​ ಸಾಮೂಹಿಕ ಅತ್ಯಾಚಾರ ಪ್ರಕರಣ ಸೇರಿ ಐದು ಅತ್ಯಾಚಾರ ಪ್ರಕರಣಗಳು ರಾಜಸ್ಥಾನದಲ್ಲಿ ಇತ್ತೀಚೆಗೆ ವರದಿಯಾಗಿವೆ.

For All Latest Updates

TAGGED:

ABOUT THE AUTHOR

...view details