ಕಚ್:ಅಪ್ರಾಪ್ತೆಯೊಬ್ಬಳು ತನ್ನ ಸ್ವಂತ ಕಿರಿಯ ಸಹೋದರನಿಂದಲೇ ತಾಯಿಯಾಗಿ ಮಗುವಿಗೆ ಜನ್ಮ ನೀಡಿರುವ ಘಟನೆ ಕಚ್ ಜಿಲ್ಲೆಯಲ್ಲಿ ನಡೆದಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ 14ರ ಪೋರ... ಸ್ವಂತ ತಮ್ಮನಿಂದಲೇ ತಾಯಿಯಾದ ಅಕ್ಕ! - 15 Years minor girl was rpaed by her 14 years brother,
ಕಿರಿಯ ಸಹೋದರ ತನ್ನ ಅಕ್ಕನ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ್ದಾನೆ. ತನಗಿಂತ ಒಂದು ವರ್ಷ ಚಿಕ್ಕ ಸಹೋದರನಿಂದಾಗಿ ಅಪ್ರಾಪ್ತೆಯೊಬ್ಬಳು ತಾಯಿಯಾಗಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ.
ಇಲ್ಲಿನ ಗ್ರಾಮವೊಂದರ ಕುಟುಂಬದಲ್ಲಿ 15 ವರ್ಷದ ಬಾಲಕಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ವಿಪರೀತ ಹೊಟ್ಟೆ ನೋವು ಕಾರಣ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಆ ಬಾಲಕಿ ಗರ್ಭಿಣಿಯಾಗಿರುವುದು ಗೊತ್ತಾಗಿದೆ.
ಇನ್ನು ಹೆರಿಗೆ ನೋವು ಕಾಣಿಸಿಕೊಂಡು ಬಾಲಕಿಗೆ ಗಂಡು ಮಗು ಜನಿಸಿದೆ. ಈ ಮಗುವಿನ ತಂದೆ ಯಾರು ಅಂತಾ ಬಾಲಕಿಗೆ ತಾಯಿ ಕೇಳಿದಾಗ, ತನ್ನ ಕಿರಿಯ ಸಹೋದರನೇ ಇದಕ್ಕೆ ಕಾರಣವೆಂದು ಬಾಲಕಿ ಹೇಳಿದ್ದಾಳೆ. ಕೂಡಲೇ ಬಾಲಕಿ ತಾಯಿ ತನ್ನ ಹೆತ್ತ ಮಗನ ಮೇಲೆ ಪೊಲೀಸರಿಗೆ ದೂರು ನೀಡಿದ್ದಾಳೆ. 14 ವರ್ಷದ ಬಾಲಕನ ಮೇಲೆ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
TAGGED:
15 ವರ್ಷದ ಬಾಲಕಿ ಅತ್ಯಾಚಾರ,