ನವದೆಹಲಿ:ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿರುವ ಒಟ್ಟು 716 ಮಹಿಳಾ ಅಭ್ಯರ್ಥಿಗಳ ಪೈಕಿ 100 (ಶೇ 15ರಷ್ಟು) ಜನ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾಮ್ರ್ಸ್ (ಎಡಿಆರ್) ವರದಿ ಮಾಡಿದ್ದು, ಇದರಲ್ಲಿ 78 ಮಹಿಳಾ ಅಭ್ಯರ್ಥಿಗಳ (ಶೇ 11ರಷ್ಟು) ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿ ಆಗಿದ್ದಾರೆ.
ರಾಜಕೀಯ ಪಕ್ಷಗಳವಾರು ಪೈಕಿ ಅತಿಹೆಚ್ಚು ಅಪರಾಧ ಹಿನ್ನಲ್ಲೆ ಹೊಂದಿರುವ ಅಭ್ಯರ್ಥಿಗಳು ಇರುವುದು ಕಾಂಗ್ರೆಸ್ನಲ್ಲಿ. ಕೈ ಪಕ್ಷದಿಂದ ಒಟ್ಟು 54 ನಾರಿಯರಿಗೆ ಟಿಕೆಟ್ ಸಿಕ್ಕಿದ್ದು, ಇದರಲ್ಲಿ 14 (ಶೇ 26ರಷ್ಟು) ಅಪರಾಧ ಎಸಗಿದವರು ಇದ್ದಾರೆ.
ಎರಡನೇ ಸ್ಥಾನದಲ್ಲಿ ಆಡಳಿತ ಪಕ್ಷ ಬಿಜೆಪಿ ಇದ್ದು, ಒಟ್ಟು 53 ಅಭ್ಯರ್ಥಿಗಳಲ್ಲಿ 18 (ಶೇ 34ರಷ್ಟು) ಮಂದಿ ಕ್ರಿಮಿನಲ್ ಹಿನ್ನಲೆಯವರು ಇದ್ದಾರೆ. ಬಿಎಸ್ಪಿ- 2 (ಶೇ 8ರಷ್ಟು), ಟಿಎಂಸಿ- 6 (ಶೇ 26ರಷ್ಟು) ಹಾಗೂ 222 ಮಹಿಳಾ ಪಕ್ಷೇತರರು ಇದ್ದು, ಇದರಲ್ಲಿ 22 (ಶೇ 10ರಷ್ಟು) ಅಪರಾಧದ ಆಪಾದೆನೆ ಹೊಂದಿದ್ದಾರೆ ಎಂದು ತಿಳಿಸಿದೆ.
ಗಂಭೀರ ಅಪರಾಧ ಪ್ರಕರಣಗಳ ಪೈಕಿಯೂ ಕಾಂಗ್ರೆಸ್ 10 ಅಭ್ಯರ್ಥಿಗಳಿಂದ ಮೊದಲ ಸ್ಥಾನದಲ್ಲಿದೆ. ಬಿಜೆಪಿ- 13, ಬಿಎಸ್ಪಿ- 2, ಟಿಎಂಸಿ- 4 ಹಾಗೂ 21 ಪಕ್ಷೇತರರು ಇದ್ದಾರೆ ಎಂದು ಮಾಹಿತಿ ನೀಡಿದೆ.