ನವದೆಹಲಿ: ಕೊರೊನಾ ಮಹಾಮಾರಿ ವಿರುದ್ಧ ಹೋರಾಟ ನಡೆಸಿರುವ ಭಾರತ ಲಾಕ್ಡೌನ್ ಸಂಕಷ್ಟಕ್ಕೊಳಗಾಗಿದ್ದು, ಅದರಿಂದ ಹೊರಬರಲು ಹರಸಾಹಸ ಪಡ್ತಿದೆ. ಇದರ ಮಧ್ಯೆ ಗಡಿಯಲ್ಲಿ ನಿರಂತರವಾಗಿ ತೊಂದರೆ ನೀಡುತ್ತಿರುವ ಪಾಕ್ ಯೋಧರು ಹಾಗೂ ಉಗ್ರರಿಗೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದೆ.
ಕೋವಿಡ್ ಮಧ್ಯೆ ಉಪಟಳ: 15 ಪಾಕ್ ಯೋಧರು, 8 ಉಗ್ರರ ಸದೆಬಡಿದ ಭಾರತೀಯ ಸೇನೆ - 15 ಪಾಕ್ ಯೋಧರು
ಮಹಾಮಾರಿ ಕೊರೊನಾ ವಿರುದ್ದ ದೇಶವೇ ಹೋರಾಟ ನಡೆಸುತ್ತಿದೆ. ಇದರ ಮಧ್ಯೆ ಗಡಿಯಲ್ಲಿ ನಿರಂತರವಾಗಿ ಉಪಟಳ ನೀಡ್ತಿದ್ದ ಉಗ್ರರು-ಪಾಕ್ ಯೋಧರಿಗೆ ಸರಿಯಾದ ಪಾಠ ಕಲಿಸಲಾಗಿದೆ.
ಕಳೆದ ಏಪ್ರಿಲ್ 10ರಂದು ಕೇರನ್ ಸೆಕ್ಟರ್ನಲ್ಲಿ ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ನಡೆಸಿದ್ದ ದಾಳಿಯ ವೇಳೆ ಪ್ರತಿದಾಳಿ ನಡೆಸಿ 8 ಮಂದಿ ಉಗ್ರರು, 15 ಪಾಕ್ ಯೋಧರು ಹಾಗೂ ಇಬ್ಬರು ಸೆಕ್ಯುರಿಟಿ ಸಿಬ್ಬಂದಿ ಸೆದೆಬಡಿದಿರುವುದಾಗಿ ಮಾಹಿತಿ ಹೊರಬಿದ್ದಿದೆ. ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ವ್ಯಾಪ್ತಿಯಲ್ಲಿನ ಕೇರನ್ ಸೆಕ್ಟರ್ನಲ್ಲಿ ಗಡಿದಾಟಿ ಒಳನುಗ್ಗಿದ್ದ ಉಗ್ರರು ಹಾಗು ಪಾಕ್ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಈ ವೇಳೆ ಐವರು ಭಾರತೀಯ ಯೋಧರು ಕೂಡ ಹುತಾತ್ಮರಾಗಿದ್ದರು.
ಕಿಶನ್ಗಂಗಾ ನದಿ ಹಾಗೂ ದುಧನಿಯಲ್ನಲ್ಲಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದ್ದ ಪಾಕ್ಗೆ ಭಾರತೀಯ ಸೇನೆ ಮುಟ್ಟಿನೊಡಿಕೊಳ್ಳುವ ರೀತಿಯಲ್ಲಿ ತಿರುಗೇಟು ನೀಡಿದೆ. ಸಾವನ್ನಪ್ಪಿರುವ ಉಗ್ರರು ಜೈಷ್-ಇ-ಮೊಹಮ್ಮದ್ ಸಂಘಟನೆಯವರು ಎಂದು ತಿಳಿದು ಬಂದಿದೆ. ದಾಳಿ ವೇಳೆ ನಾಲ್ವರು ನಾಗರಿಕರು ಹಾಗೂ 15 ವರ್ಷದ ಬಾಲಕಿ ಗಾಯಗೊಂಡಿದ್ದಾಗಿ ತಿಳಿಸಿದ್ದಾರೆ.