ಕೃಷ್ಣಾ(ಆಂಧ್ರ ಪ್ರದೇಶ): ದೊಡ್ಡದಾದ ಮೀನು ಬಲೆಗೆ ಬಿದ್ದಿದೆ ಎಂದುಕೊಂಡಿದ್ದ ಮೀನುಗಾರರಿಗೆ ಹೆಬ್ಬಾವೊಂದು ಶಾಕ್ ನೀಡಿರುವ ಘಟನೆ ದೇವರಪಲ್ಲಿಯ ನದಿಯಲ್ಲಿ ಕಂಡುಬಂದಿದೆ.
ಮೀನಿನ ಬಲೆಗೆ ಬಿದ್ದ ಬೃಹತ್ ಗಾತ್ರದ ಹೆಬ್ಬಾವು.. ಬೆರಗಾದ ಮೀನುಗಾರರು! - ಹೆಬ್ಬಾವು ಸುದ್ದಿ
ಮೀನುಗಾರರ ಬಲೆಗೆ ಬೃಹತ್ ಹೆಬ್ಬಾವುವೊಂದು ಸಿಲುಕಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.
ಮೀನಿನ ಬಲೆಗೆ ಬಿದ್ದ ಬೃಹತ್ ಹೆಬ್ಬಾವು
ತೋಟ್ಲವಲ್ಲೂರು ತಾಲೂಕಿನ ದೇವರಪಲ್ಲಿ ಮೀನುಗಾರರು ಮೀನು ಹಿಡಿಯಲು ನದಿಗೆ ತೆರಳಿದ್ದರು. ಮೀನಿನ ಬಲೆ ಎಳೆದಾಗ ದೊಡ್ಡ ಮೀನು ಬಲೆಗೆ ಬಿದ್ದಿರಬಹುದೆಂದು ತಿಳಿದಿದ್ದರು. ಆದ್ರೆ ಬಲೆಯಲ್ಲಿ ಹೆಬ್ಬಾವೊಂದು ಸಿಲುಕಿರುವುದು ಬೆಳಕಿಗೆ ಬಂದಿದೆ.
ಈ ಹೆಬ್ಬಾವು ಸುಮಾರು 15 ಅಡಿಗೂ ಹೆಚ್ಚು ಉದ್ದವಿದೆ. ಬಲೆಯಲ್ಲಿ ಬಿದ್ದ ಹೆಬ್ಬಾವನ್ನು ನದಿ ದಡಕ್ಕೆ ತಂದು ಮೀನುಗಾರರು ಅರಣ್ಯ ಅಧಿಕಾರಿಗಳಿಗೆ ಫೋನ್ ಮಾಡಿದ್ದಾರೆ. ಬಳಿಕ ಅಧಿಕಾರಿಗಳು ಬಲೆಯಿಂದ ಹೆಬ್ಬಾವನ್ನು ಬಿಡಿಸಿ ಕಾಡಿಗೆ ಬಿಟ್ಟಿದ್ದಾರೆ.