ಕರ್ನಾಟಕ

karnataka

ETV Bharat / bharat

ಕೊರೊನಾ ಫಜೀತಿ: ಉಜ್ಬೇಕಿಸ್ತಾನ್​ನಲ್ಲೇ ಸಿಲುಕಿದ ಮಹಾರಾಷ್ಟ್ರದ 15 ಮಂದಿ ವೈದ್ಯರು

ಒಂದು ವಾರದ ಹಿಂದೆ ಪ್ರವಾಸಕ್ಕೆಂದು ಉಜ್ಬೇಕಿಸ್ತಾನ್​ಗೆ ತೆರಳಿದ​ ಮಹಾರಾಷ್ಟ್ರದ 15 ಮಂದಿ ವೈದ್ಯರು ಈಗ ಭಾರತಕ್ಕೆ ಹಿಂದಿರುಗಲಾಗದೆ ಪರದಾಡುತ್ತಿದ್ದು, ಸರ್ಕಾರದ ಸಹಾಯ ಕೇಳುತ್ತಿದ್ದಾರೆ.

solapur district of maharastra
ಉಜ್ಬೇಕಿಸ್ತಾನ್​ನಲ್ಲೇ ಸಿಲುಕಿದ ಮಹಾರಾಷ್ಟ್ರದ 15 ಮಂದಿ ವೈದ್ಯರು

By

Published : Mar 17, 2020, 3:06 PM IST

Updated : Mar 17, 2020, 3:21 PM IST

ಮಹಾರಾಷ್ಟ್ರ:ಉಜ್ಬೇಕಿಸ್ತಾನ್​ಗೆ ಪ್ರವಾಸಕ್ಕೆಂದು ತೆರಳಿದ​ ಮಹಾರಾಷ್ಟ್ರದ ಸೋಲಾಪುರ್​​​ನ 15 ಮಂದಿ ವೈದ್ಯರು ಕೊರೊನಾ ವೈರಸ್​ ತಂದಿಟ್ಟ ಪರಿಸ್ಥಿತಿಯಿಂದಾಗಿ ಅಲ್ಲಿಯೇ ಸಿಲುಕುವಂತಾಗಿದೆ.

ಉಜ್ಬೇಕಿಸ್ತಾನ್​ನ ತಾಷ್ಕೆಂಟ್ ನಗರದಲ್ಲಿ ಸಿಲುಕಿರುವ ಈ ವೈದ್ಯರುಗಳು, ವಾಟ್ಸ್​ ಆಪ್​, ಫೇಸ್​ಬುಕ್​ ಮೂಲಕ ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರನ್ನು ಸಂಪರ್ಕಿಸಿ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಒಂದು ವಾರದ ಹಿಂದೆ ಪ್ರವಾಸಕ್ಕೆಂದು ಅಲ್ಲಿಗೆ ತೆರಳಿದ್ದ ಅವರು ಇಂದು ಭಾರತಕ್ಕೆ ಹಿಂದಿರುಗಬೇಕಿತ್ತು. ಆದರೆ ವಿಮಾನ ಸೇವೆ ಸ್ಥಗಿತಗೊಳಿಸಲಾಗಿರುವ ಕಾರಣದಿಂದ ಅಲ್ಲಿಯೇ ಉಳಿದಿದ್ದಾರೆ.

ಉಜ್ಬೇಕಿಸ್ತಾನ್​ನಲ್ಲೇ ಸಿಲುಕಿದ ಮಹಾರಾಷ್ಟ್ರದ 15 ಮಂದಿ ವೈದ್ಯರು

ಒಂದು ವಾರದ ಹಿಂದೆ ಉಜ್ಬೇಕಿಸ್ತಾನ್​ನಲ್ಲಿ ಯಾವುದೇ ಕೊವಿಡ್​-19 ಪ್ರಕರಣಗಳು ವರದಿಯಾಗಿರಲಿಲ್ಲ. ಆದರೆ ಅಲ್ಲಿ ಮಾ.15 ರಂದು ಮೊದಲ ಕೊರೊನಾ ಪ್ರಕರಣ ವರದಿಯಾಗಿತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅವರನ್ನು ಕರೆತರಬೇಕೆಂದು ವೈದ್ಯರ ಕುಟುಂಬಸ್ಥರು ಹಾಗೂ ವೈದ್ಯಕೀಯ ಸಂಘಟನೆಗಳು ಆಗ್ರಹಿಸಿವೆ.

Last Updated : Mar 17, 2020, 3:21 PM IST

ABOUT THE AUTHOR

...view details