ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯ ಗ್ರಾಫ್ ನಿತ್ಯವೂ ಏರಿಕೆ ಕಾಣುತ್ತಲೇ ಇದೆ. ಸೋಮವಾರ ಒಂದೇ ದಿನ 37,148 ಜನರಿಗೆ ಸೋಂಕು ಕಾಣಿಸಿಕೊಂಡಿದೆ.
ಈ ಮೂಲಕ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 11,55,191(11.55ಲಕ್ಷ) ಕ್ಕೆ ಏರಿಕೆ ಆಗಿದೆ. ಇನ್ನು ಸಾವಿನ ಸಂಖ್ಯೆ ಭಾರತದಲ್ಲಿ 28,084 ಕ್ಕೆ ಏರಿಕೆ ಕಂಡಿದೆ. ಅಷ್ಟೇ ಕಳೆದ 24 ಗಂಟೆಗಳಲ್ಲಿ 587 ಮಂದಿ ಮೃತಪಟ್ಟಿದ್ದಾರೆ.
ಇದುವರೆಗೂ ದೇಶದಲ್ಲಿ 1.43 ಕೋಟಿ(1,43,81,303) ಮಾದರಿಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ನಿನ್ನೆ ಒಂದೇ ದಿನ 3,33,395(3.3 ಲಕ್ಷ) ಜನರ ಸ್ಯಾಂಪಲ್ಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಐಸಿಎಂಆರ್ ಹೇಳಿದೆ. ದೇಶಾದ್ಯಂತ ಒಟ್ಟು 4,02,529 ಆ್ಯಕ್ಟಿವ್ ಕೇಸ್ಗಳಿದ್ದರೆ, 7,24,578 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇನ್ನು ವಿಶ್ವದಲ್ಲಿ ಕೊರೊನಾ ಸೋಂಕಿತರ 1.43 ಕೋಟಿಗೆ ಹೆಚ್ಚಳ ಕಂಡಿದೆ. ಇದುವರೆಗೂ ವಿಶ್ವದಲ್ಲಿ 6,03,691 ಮಂದಿ ಕೊರೊನಾದಿಂದ ಅಸುನೀಗಿದ್ದಾರೆ.