ಬಹರಾಯಿಚ್(ಉತ್ತರಪ್ರದೇಶ) :ಕೈಯಲ್ಲೊಂದು ಲಾಠಿ ಹಿಡಿದು ಪೊಲೀಸ್ ಚೆಕ್ಪೋಸ್ಟ್ನಲ್ಲಿ ನಿಂತು ಎಲ್ಲರಿಗೂ ಕೊರೊನಾ ಸುರಕ್ಷತೆಯ ಪಾಠ ಹೇಳುತ್ತಿರುವ 14 ವರ್ಷದ ಬಾಲಕನೊಬ್ಬ ಈಗ ಎಲ್ಲರ ಗಮನ ಸೆಳೆದಿದ್ದಾನೆ. ಮನೆಯಿಂದ ಯಾರೂ ಹೊರಬರಬೇಡಿ, ಎಲ್ಲರೂ ಮಾಸ್ಕ್ ಧರಿಸಿ, ಸ್ಯಾನಿಟೈಸರ್ನಿಂದ ಕೈಗಳನ್ನು ಆಗಾಗ ತೊಳೆಯಿರಿ ಎಂದು ಜಾಗೃತಿ ಮೂಡಿಸುತ್ತಿರುವ ಬಾಲಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕೊರೊನಾ ಜಾಗೃತಿಗೆ ಲಾಠಿ ಹಿಡಿದು ಪೊಲೀಸ್ ಆದ 14 ವರ್ಷದ ಬಾಲಕ!!
ಸೌಮ್ಯ ಅಗರ್ವಾಲ್ ಎಂಬ ಹೆಸರಿನ ಬಾಲಕನಲ್ಲಿರುವ ಅದ್ಭುತ ಪ್ರತಿಭೆಯನ್ನು ಗುರುತಿಸಿರುವ ಸ್ಥಳೀಯ ಪೊಲೀಸ್ ಇಲಾಖೆ, ಕೊರೊನಾ ನಿಯಂತ್ರಣ ಜಾಗೃತಿಗಾಗಿ ಬಾಲಕನನ್ನು ತನ್ನೊಂದಿಗೆ ಸೇರಿಸಿಕೊಂಡಿದೆ.
ಸೌಮ್ಯ ಅಗರ್ವಾಲ್ ಎಂಬ ಹೆಸರಿನ ಬಾಲಕನಲ್ಲಿರುವ ಅದ್ಭುತ ಪ್ರತಿಭೆ ಗುರುತಿಸಿರುವ ಸ್ಥಳೀಯ ಪೊಲೀಸ್ ಇಲಾಖೆ, ಕೊರೊನಾ ನಿಯಂತ್ರಣ ಜಾಗೃತಿಗಾಗಿ ಬಾಲಕನನ್ನು ತನ್ನೊಂದಿಗೆ ಸೇರಿಸಿಕೊಂಡಿದೆ. "ಇದು ಸಮುದಾಯ ಪೊಲೀಸಿಂಗ್ ಕಾಲವಾಗಿದೆ. ಹೀಗಾಗಿ ನಾವು ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಮೂಲಕ ಜನರಿಗೆ ಜಾಗೃತಿ ಮೂಡಿಸಲು ಬಾಲಕ ಸೌಮ್ಯ ಅಗರ್ವಾಲ್ನನ್ನು ಜೊತೆಗಿರಿಸಿಕೊಂಡಿದ್ದೇವೆ." ಎನ್ನುತ್ತಾರೆ ಸ್ಥಳೀಯ ಎಸ್ಪಿ ವಿಪಿನ್ ಮಿಶ್ರಾ.
ಸೌಮ್ಯ ಅಗರ್ವಾಲ್ ಭವಿಷ್ಯದಲ್ಲಿ ಪೊಲೀಸ್ ಅಧಿಕಾರಿಯಾಗುವ ಗುರಿ ಹೊಂದಿದ್ದಾನೆ. ಈತನ ಆಕಾಂಕ್ಷೆಗಳಿಗೆ ಸ್ಪಂದಿಸಿರುವ ಪೊಲೀಸ್ ಇಲಾಖೆ ಪೊಲೀಸ್ ಜವಾಬ್ದಾರಿ ನಿರ್ವಹಿಸುವ ಅವಕಾಶವೊಂದನ್ನು ಈತನಿಗೆ ನೀಡಿದ್ದಾರೆ.