ಪಾಟ್ನಾ:ಕಾರ್ತಿಕ ಪೂರ್ಣಿಮೆ ದಿನ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಸ್ನಾನ ಮಾಡಲು ತೆರಳಿದ್ದಾಗ 14 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಾರ್ತಿಕ ಪೂರ್ಣಿಮೆ ದಿನವೇ ಬಿಹಾರದ ವಿವಿಧೆಡೆ 14 ಮಂದಿ ದುರ್ಮರಣ! - ಬಿಹಾರದ ವಿವಿಧೆಡೆ 14 ಮಂದಿ ದುರ್ಮರಣ
ಕಾರ್ತಿಕ ಪೂರ್ಣಿಮೆ ದಿನವೇ ಬಿಹಾರದ ವಿವಿಧ ಪ್ರದೇಶಗಳಲ್ಲಿ ಸ್ನಾನಕ್ಕಾಗಿ ತೆರಳಿದ್ದಾಗ ಅನೇಕರು ಸಾವನ್ನಪ್ಪಿದ್ದು ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕಾರ್ತಿಕ್ ಪೂರ್ಣಿಮೆ ದಿನ ದುರ್ಘಟನೆ
ಕಾರ್ತಿಕ ಪೂರ್ಣಿಮೆ ದಿನ ದುರ್ಘಟನೆ
ಬಿಹಾರದಲ್ಲಿ ಕಾರ್ತಿಕ್ ಪೂರ್ಣಿಮೆ ಸಡಗರ-ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದ್ದು, ಸ್ನಾನ ಮಾಡಲು ನದಿಗೆ ತೆರಳಿದ್ದಾಗ ಈ ದುರ್ಘಟನೆ ನಡೆದಿದೆ. ಪ್ರಮುಖವಾಗಿ ನಳಂದಾದಲ್ಲಿ ಈಜಲು ತೆರಳಿದ್ದ ಮೂವರು ಯುವತಿಯರು ಸಾವನ್ನಪ್ಪಿದ್ದಾರೆ. ಇಲ್ಲಿನ ಸೂರ್ಯ ಮಂದಿರದ ಬಳಿಯಿರುವ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದಾಗ ಘಟನೆ ನಡೆದಿದೆ.
ಉಳಿದಂತೆ ನವಾದಾದಲ್ಲಿ ಎರಡು ಮಕ್ಕಳು ಹಾಗೂ ಓರ್ವ ವ್ಯಕ್ತಿ, ಸೀತಾಮಡಿಗೆ ಈಜಲು ತೆರಳಿದ್ದ ನಾಲ್ವರು,ಮುಜಾಫರ್ಪುರ್ದಲ್ಲಿ ಐವರು ಮಕ್ಕಳು ಹಾಗೂ ಮೋತಿಹಾರ್ದಲ್ಲಿ ಓರ್ವ ಮಗು ಸಾವನ್ನಪ್ಪಿದೆ.