ಮೇಷ
ನೀವು ಇಂದು ನಿಮ್ಮ ಮಕ್ಕಳ ಬೇಡಿಕೆಗೆ ಗಮನ ನೀಡುತ್ತೀರಿ. ಇಂತಹ ಸಮಯದಲ್ಲಿ ನಿಮ್ಮ ಶ್ರಮ ಅತ್ಯಂತ ಕಠಿಣವಾಗಿರುತ್ತದೆ. ನೀವು ಸುದೀರ್ಘ ಕಾಲದಿಂದ ಮುಂದೂಡುತ್ತಿದ್ದ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ವೈದ್ಯಕೀಯ ಕ್ಷೇತ್ರ ಹಾಗೂ ಸಾರ್ವಜನಿಕ ವಲಯದಲ್ಲಿ ಇರುವವರಿಗೆ ಇದು ಒಳ್ಳೆಯ ದಿನ.
ವೃಷಭ
ಇಂದು, ನೀವು ಸಾಧ್ಯವಿರುವಷ್ಟೂ ಸೃಜನಶೀಲ ಮತ್ತು ಸ್ಪರ್ಧಾತ್ಮಕವಾಗಿರುತ್ತಿರಿ. ನಿಮ್ಮ ಕೆಲಸದ ಶೈಲಿ, ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳಲ್ಲಿ ವಿಸ್ಮಯ ಮತ್ತು ಅಚ್ಚರಿಗೊಳಿಸುತ್ತದೆ. ನಿಮ್ಮ ಕೈ ಕೆಳಗಿನವರು ಅತ್ಯಂತ ಪ್ರಭಾವಿತರು ಮತ್ತು ಪ್ರೇರೇಪಣೆ ಹೊಂದುತ್ತಾರೆ.
ಮಿಥುನ
ನೀವು ಇಂದು ಬುದ್ಧಿಗಿಂತ ಹೃದಯದ ಮಾತು ಕೇಳುತ್ತೀರಿ, ಭಾವನೆಗಳ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತೀರಿ. ಇದರ ಅರ್ಥ ನೀವು ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ವ್ಯತ್ಯಾಸ ಕಂಡುಕೊಳ್ಳಲು ಅಶಕ್ತರಾಗುತ್ತೀರಿ. ಆದರೆ ಸಂಜೆಯ ವೇಳೆಗೆ ಸಂಗತಿಗಳು ಸುಧಾರಿಸುತ್ತವೆ.
ಕರ್ಕಾಟಕ
ಈ ದಿನವನ್ನು ನೀವು ಉಜ್ವಲ ಭವಿಷ್ಯಕ್ಕಾಗಿ ಖಚಿತವಾದ ಯೋಜನೆಯಿಂದ ಪ್ರಾರಂಭಿಸುತ್ತೀರಿ. ನೀವು ಆಲೋಚನಾಯುಕ್ತವಾಗಿ ರೂಪಿಸಿದ ಕಾರ್ಯತಂತ್ರಗಳನ್ನು ದೃಢವಾಗಿ ಅನುಷ್ಠಾನಗೊಳಿಸುತ್ತೀರಿ. ಅಂತಹ ವಿಧಾನಾತ್ಮಕ ನಿರ್ಧಾರಗಳು ಭವಿಷ್ಯದಲ್ಲಿ ನಿಮಗೆ ಸಾಕಷ್ಟು ಸಮಯ ಉಳಿಸುತ್ತವೆ. ಇಂದು ನೀವು ಪ್ರತಿ ಪ್ರಯತ್ನದಲ್ಲೂ ಯಶಸ್ವಿಯಾಗುತ್ತೀರಿ.
ಸಿಂಹ
ಇಂದು ನಿಮ್ಮ ನಿರ್ಧಾರಗಳು ಸರಿಯಾಗಿರುವುದು ಮಾತ್ರವಲ್ಲದೆ ದೃಢ ಮತ್ತು ಅಚಲವಾಗಿರಬೇಕು. ನಿಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ವಿಷಯಗಳು ಎಂದಿನಂತೆ ಮುಂದುವರೆಯುತ್ತವೆ. ಆದಾಗ್ಯೂ, ನೀವು ಇಂದು ಕೆಲಸಕ್ಕೆ ಹೆಚ್ಚು ಗಮನ ನೀಡುತ್ತೀರಿ. ವೈಯಕ್ತಿಕ ಬಾಂಧವ್ಯಗಳಲ್ಲಿ, ಕೆಲ ಸಣ್ಣ ವಾದವಿವಾದಗಳು ಉಂಟಾಗಬಹುದು. ಅವು ದೊಡ್ಡ ಸಂಘರ್ಷಗಳಾಗದೆ ನೋಡಿಕೊಳ್ಳಿ.
ಕನ್ಯಾ
ಈ ದಿನ ನಿಮಗೆ ನಿಮ್ಮ ಕುಟುಂಬದ ವಿಷಯಗಳ ಮೌಲ್ಯ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಮುಂದಿನ ವಿವಾದಗಳು ನಿಮ್ಮ ಅದ್ಭುತ ಸಂಧಾನ ಕೌಶಲ್ಯಗಳಿಂದ ಸುಲಭವಾಗಿ ಇತ್ಯರ್ಥವಾಗುತ್ತವೆ. ನಿಮ್ಮ ಶಾಂತ ಮತ್ತು ಲೆಕ್ಕಾಚಾರದ ಸ್ವಭಾವ ಜೀವನದೊಂದಿಗೆ ವ್ಯವಹರಿಸಲು ನೆರವಾಗುತ್ತದೆ ಮತ್ತು ಹಲವು ಪಾಠಗಳನ್ನು ಬೋಧಿಸುತ್ತದೆ.