ಕರ್ನಾಟಕ

karnataka

ETV Bharat / bharat

ಆಂಧ್ರಪ್ರದೇಶ: ಹಾಲಿನ ಘಟಕದಲ್ಲಿ ಅಮೋನಿಯಾ ಗ್ಯಾಸ್ ಸೋರಿಕೆ... 14 ಜನ ಆಸ್ಪತ್ರೆಗೆ ದಾಖಲು

ಆಂಧ್ರಪ್ರದೇಶದಲ್ಲಿ ಮತ್ತೊಮ್ಮೆ ಗ್ಯಾಸ್ ಸೋರಿಕೆ ಅವಘಡ ಸಂಭವಿಸಿದೆ. ಹಾಲಿನ ಡೈರಿ ಘಟಕದಲ್ಲಿ ಅಮೋನಿಯಾ ಗ್ಯಾಸ್ ಸೋರಿಕೆಯಾಗಿ 14 ಜನ ಅಸ್ವಸ್ಥರಾಗಿದ್ದಾರೆ.

ಹಾಲಿನ ಘಟಕದಲ್ಲಿ ಅಮೋನಿಯಾ ಗ್ಯಾಸ್ ಸೋರಿಕೆ... 14 ಜನ ಆಸ್ಪತ್ರೆಗೆ ದಾಖಲು
ಹಾಲಿನ ಘಟಕದಲ್ಲಿ ಅಮೋನಿಯಾ ಗ್ಯಾಸ್ ಸೋರಿಕೆ... 14 ಜನ ಆಸ್ಪತ್ರೆಗೆ ದಾಖಲು

By

Published : Aug 21, 2020, 5:44 AM IST

ಚಿತ್ತೂರ್: ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯ ಬಂಡಾಪಲ್ಲಿಯಲ್ಲಿನ ಹಾಲಿನ ಡೈರಿ ಘಟಕದಲ್ಲಿ ಅಮೋನಿಯಾ ಗ್ಯಾಸ್ ಸೋರಿಕೆಯಾಗಿದೆ. ಪರಿಣಾಮ 14 ಜನ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾಯಂಕಾಲ 5ಕ್ಕೆ ಹಟ್ಸನ್ ಕಂಪನಿಯ ಹಾಲಿನ ಘಟಕದಲ್ಲಿ ಅಮೋನಿಯಾ ಗ್ಯಾಸ್ ಸೋರಿಕೆ ಆದ ಬಗ್ಗೆ ಮಾಹಿತಿ ಬಂತು. ಅಲ್ಲೇ ಕೆಲಸ ಮಾಡುತ್ತಿದ್ದ 14 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಉಳಿದವರ ಆರೋಗ್ಯ ಸ್ಥಿರವಾಗಿದೆ ಎಂದು ಚಿತ್ತೂರ್ ಡಿಸಿ ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಾದವರೆಲ್ಲರೂ ಮಹಿಳೆಯರೇ ಆಗಿದ್ದಾರೆ. ಘಟನೆಕೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ. ಕಂಪನಿಯ ನಿರ್ಲಕ್ಷ್ಯವಾಗಿದ್ದರೆ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details