ಕರ್ನಾಟಕ

karnataka

ETV Bharat / bharat

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: 14 ಮಂದಿಯ ದುರ್ಮರಣ - ಬಸ್​ ಹಾಗೂ ಟ್ರಕ್​ ಡಿಕ್ಕಿ

ಬಸ್​ ಹಾಗೂ ಟ್ರಕ್​ ಡಿಕ್ಕಿಯಾದ ಪರಿಣಾಮ 14 ಮಂದಿ ಸಾವಿಗೀಡಾಗಿದ್ದು, ಅನೇಕರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

bus collided with a truck on the Agra-Lucknow Expressway
ಉತ್ತರ ಪ್ರದೇಶದಲ್ಲಿ ಬಳಿ ಭೀಕರ ರಸ್ತೆ ಅಪಘಾತ

By

Published : Feb 13, 2020, 3:54 AM IST

ಫಿರೋಜಾಬಾದ್​:ಬಸ್​ ಹಾಗೂ ಟ್ರಕ್​ ಡಿಕ್ಕಿಯಾದ ಪರಿಣಾಮ 14 ಮಂದಿ ಸಾವಿಗೀಡಾದ ಘಟನೆ ಉತ್ತರ ಪ್ರದೇಶದ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ಬುಧವಾರ ರಾತ್ರಿ ನಡೆದಿದೆ.

ಕಳೆದ ರಾತ್ರಿ ಸುಮಾರು 10 ಗಂಟೆ ವೇಳೆಗೆ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ​ಡಬಲ್​ ಡೆಕ್ಕರ್​ ಖಾಸಗಿ ಬಸ್​ ಲಾರಿಗೆ ​ ಡಿಕ್ಕಿ ಹೊಡೆದಿದೆ. ಬಸ್​ನಲ್ಲಿ 40-45 ಪ್ರಯಾಣಿಕರಿದ್ದು, 14 ಮಂದಿ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದು, ಗಾಯಾಳುಗಳನ್ನು ಸೈಫಾಯಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಫಿರೋಜಾಬಾದ್ ಎಸ್​ಎಸ್​ಪಿ ಸಚೀಂದ್ರ ಪಟೇಲ್​ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ....

ABOUT THE AUTHOR

...view details