ಕರ್ನಾಟಕ

karnataka

ETV Bharat / bharat

ತಂದೆಯ ಮೊಬೈಲ್‌ನಲ್ಲಿ ಅಶ್ಲೀಲ ದೃಶ್ಯ ನೋಡಿದ 13ರ ಪೋರ: 6 ವರ್ಷದ ಬಾಲಕಿ ಮೇಲೆ ರೇಪ್‌ ಮಾಡಿ ಕೊಲೆಗೈದ! - ಮರ್ಡರ್

13 ವರ್ಷದ ಬಾಲಕ 6 ವರ್ಷದ ಬಾಲಕಿಯನ್ನು ಕೊಲೆಗೈದಿರುವ ಘಟನೆ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Oct 31, 2019, 9:51 PM IST

ಮುಂಬೈ:ತಂದೆ ಮೊಬೈಲ್​ ತೆಗೆದುಕೊಂಡು ಅದರಲ್ಲಿ ಪೋರ್ನ್​ ವಿಡಿಯೋ ವೀಕ್ಷಣೆ ಮಾಡುತ್ತಿದ್ದ 13 ವರ್ಷದ ಬಾಲಕ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದು, ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಭಿವಾಂಡಿಯಲ್ಲಿ ಈ ಘಟನೆ ನಡೆದಿದ್ದು, ಘಟನೆ ನಡೆದು ಎರಡು ದಿನಗಳ ಬಾಲಕ ತಾನು ಮಾಡಿರುವ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಸೋದರ ಸಂಬಂಧಿಯಾಗಿದ್ದ ಬಾಲಕಿ ಮೇಲೆ ಈ ಕೃತ್ಯವೆಸಗಿರುವ ಬಾಲಕನನ್ನು ಇದೀಗ ಕೊಂಗಾಂವ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ತನ್ನ ತಂದೆಯ ಮೊಬೈಲ್​​ನಲ್ಲಿ ಅಶ್ಲೀಲ ದೃಶ್ಯ ನೋಡುವ ಚಟ ಬೆಳೆಸಿಕೊಂಡಿದ್ದ ಬಾಲಕ, ದೀಪಾವಳಿಯ ದಿನ ಮನೆಯ ಹೊರಗಡೆ ಪಟಾಕಿ ಹೊಡೆಯುತ್ತಿದ್ದ ಬಾಲಕಿಯನ್ನು ನೋಡಿದ್ದಾನೆ. ಈ ವೇಳೆ ಆಕೆಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಮಂಗಳವಾರ ಸ್ಥಳೀಯರು ಬಾಲಕಿಯ ಶವವನ್ನು ಪೈಪ್‍ಲೈನ್ ಬಳಿ ನೋಡಿ, ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಬಾಲಕಿ ನಾಪತ್ತೆಯಾಗಿದ್ದ ಬಗ್ಗೆ ಪೋಷಕರು ದೂರು ನೀಡುತ್ತಿದ್ದಂತೆ ಶೋಧಕಾರ್ಯ ತೀವ್ರಗೊಳಿಸಿದ ಪೊಲೀಸರು ಬಾಲಕನ ವಿಚಾರಣೆ ನಡೆಸಿದಾಗ ನಿಜಾಂಶ ಬಯಲಾಗಿದೆ. ತಾನು ಬಾಲಕಿ ಮೇಲೆ ಅತ್ಯಾಚಾರವೆಸಗಲು ಮುಂದಾಗುತ್ತಿದ್ದಂತೆ ಆಕೆ ಅಳೋದಕ್ಕೆ ಶುರು ಮಾಡಿದ್ದರಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದೇನೆ ಎಂದು ಬಾಲಕ ಹೇಳಿದ್ದಾನೆ. ಇನ್ನು ಬಾಲಕನ ತಂದೆಯ ಮೊಬೈಲ್​ ಸರ್ಚ್​ ಎಂಜಿನ್​ನಲ್ಲಿ ವಿವಿಧ ಅಶ್ಲೀಲ​ ವೆಬ್​ಸೈಟ್‌ಗಳನ್ನು ಜಾಲಾಡಿದ​ ಬಗ್ಗೆ ಮಾಹಿತಿ ಪೊಲೀಸರಿಗೆ ದೊರೆತಿದೆ.

ABOUT THE AUTHOR

...view details