ಕರ್ನಾಟಕ

karnataka

ETV Bharat / bharat

ಸಶಸ್ತ್ರ ಸೀಮಾ ಬಲದ ಒಟ್ಟು 13 ಮಂದಿಗೆ ಸೋಂಕು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸಶಸ್ತ್ರ ಸೀಮಾ ಬಲ(SSB) ದಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು 13 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರನ್ನು ದೆಹಲಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

SSB
ಎಸ್​ಎಸ್​ಬಿ

By

Published : May 4, 2020, 8:01 PM IST

ನವದೆಹಲಿ:ಸಶಸ್ತ್ರ ಸೀಮಾಬಲದ 25ನೇ ಬೆಟಾಲಿಯನ್​ಗೆ ಸೇರಿದ ಒಟ್ಟು 13 ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 8 ಮಂದಿಯಲ್ಲಿ ಕೊರೊನಾ ಸೋಂಕು ಇಂದು ದೃಢಪಟ್ಟಿದ್ದು, ಹಿಂದಿನ ವಾರ ನಾಲ್ವರಿಗೆ ಸೋಂಕು ಪತ್ತೆಯಾಗಿತ್ತು.

ಎಸ್​ಎಸ್​ಬಿಯ 25 ಬೆಟಾಲಿಯನ್​ನಲ್ಲಿದ್ದ​ ದೆಹಲಿಯ ಹೊರವಲಯದಲ್ಲಿರುವ ಘಿತೋರ್ನಿ ಮೂಲದ ಪೇದೆಯಲ್ಲಿ 10 ದಿನಗಳ ಹಿಂದೆ ಸೋಂಕು ಪತ್ತೆಯಾಗಿತ್ತು ಎಂದು ಸಶಸ್ತ್ರ ಸೀಮಾಬಲದ ವಕ್ತಾರ ವಿನಯ್​ ಓಜಾ ಸ್ಪಷ್ಟನೆ ನೀಡಿದ್ದಾರೆ.

ಓರ್ವ ಅಸಿಸ್ಟೆಂಟ್​ ಸಬ್​ ಇನ್ಸ್​ಪೆಕ್ಟರ್​ ಸೇರಿದಂತೆ 13 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಎಲ್ಲರನ್ನೂ ದೆಹಲಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಟಾಲಿಯನ್​​ನ ಉಳಿದ ಸಿಬ್ಬಂದಿಯನ್ನು ಹೋಮ್​ ಕ್ವಾರಂಟೈನ್​ನಲ್ಲಿ ಇಡಲಾಗಿದೆ ಎಂದು ವಿನಯ್​ ಓಜಾ ಹೇಳಿದ್ದಾರೆ.

ಸಶಸ್ತ್ರ ಸೀಮಾ ಬಲದ ಬಗ್ಗೆ ಒಂದಿಷ್ಟು..

ದೇಶದಲ್ಲಿ 80 ಸಾವಿರ ಎಸ್​ಎಸ್​ಬಿ ಸಿಬ್ಬಂದಿಯಿದ್ದು, ಸುಮಾರು 1,751 ಕಿಲೋಮೀಟರ್ ಇರುವ ಭಾರತ, ನೇಪಾಳ ಗಡಿ ಹಾಗೂ 699 ಕಿಲೋಮೀಟರ್ ಇರುವ ಭಾರತ ನೇಪಾಳ ಗಡಿಯನ್ನು ಕಾಯುತ್ತಿದ್ದಾರೆ.

ABOUT THE AUTHOR

...view details