ಕರ್ನಾಟಕ

karnataka

ETV Bharat / bharat

ಸಿಡಿಲಬ್ಬರಕ್ಕೆ 13 ಮಂದಿ ಬಲಿ: ಪರಿಹಾರ ಘೋಷಿಸಿದ ಯುಪಿ ಸಿಎಂ - ಸಂಜಯ್ ಗೋಯೆಲ್

ಉತ್ತರ ಪ್ರದೇಶದ ಹಲವೆಡೆ ಸಿಡಿಲು ಬಡಿದು 13 ಮಂದಿ ಮೃತಪಟ್ಟಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್,​ ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಿದ್ದಾರೆ.

13 killed of  lightning strike
ಸಿಡಿಲಿಗೆ 13 ಮಂದಿ ಬಲಿ

By

Published : Sep 16, 2020, 7:32 AM IST

ಲಖನೌ( ಉತ್ತರ ಪ್ರದೇಶ) : ಉತ್ತರ ಭಾರತದ ಹಲವೆಡೆ ಮಳೆಯ ಪ್ರಮಾಣ ಹೆಚ್ಚಾಗಿದೆ. ಉತ್ತರ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಸಿಡಿಲು ಬಡಿದ ಕಾರಣಕ್ಕೆ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಗಾಜಿಯಾಪುರದಲ್ಲಿ ನಾಲ್ಕು, ಕೌಂಶಬಿಯಲ್ಲಿ ಮೂರು, ಕುಶಿನಗರ ಹಾಗೂ ಚಿತ್ರಕೂಟದಲ್ಲಿ ತಲಾ ಇಬ್ಬರು, ಜೌನಪುರ ಹಾಗೂ ಚಂದೌಲಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಪರಿಹಾರ ಆಯುಕ್ತ ಸಂಜಯ್ ಗೋಯೆಲ್ ಮಾಹಿತಿ ನೀಡಿದ್ದಾರೆ.

ಸಿಡಿಲಿನಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡಲು ಜಿಲ್ಲಾಡಳಿತಗಳಿಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ ಎಂದು ಸಂಜಯ್ ಗೋಯೆಲ್ ಸ್ಪಷ್ಟನೆ ನೀಡಿದ್ದಾರೆ.

ಈಗಾಗಲೇ ಮೃತಪಟ್ಟವರಿಗೆ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ದೊರಕುವಂತೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿಯೂ ನಿರ್ಮಾಣವಾಗಿದ್ದು, ಲಖೀಂಪುರ ಖೇರಿ, ಸೀತಾಪುರ್, ಅಜಂಗರ್​ನ ಸುಮಾರು 27 ಗ್ರಾಮಗಳಿಗೆ ಹಾನಿಯಾಗಿದೆ ಎಂದು ಗೋಯೆಲ್ ತಿಳಿಸಿದ್ದಾರೆ.

ಜೂನ್​ನಿಂದ ಇಲ್ಲಿಯವರೆಗೆ ಸುಮಾರು 24 ಮಂದಿ ಸಿಡಿಲಿನ ಕಾರಣದಿಂದ ಉತ್ತರ ಪ್ರದೇಶದಲ್ಲಿ ಸಾವನ್ನಪ್ಪಿದ್ದಾರೆ.

ABOUT THE AUTHOR

...view details