ಮುಜಾಫರ್ ನಗರ( ಉತ್ತರಪ್ರದೇಶ) : ಕಳೆದ ಮೂರು ವರ್ಷಗಳಲ್ಲಿ 13 ಕುಖ್ಯಾತ ಅಪರಾಧಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಮತ್ತು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದ 258 ಜನರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೂರು ವರ್ಷಗಳಲ್ಲಿ 13 ಅಪರಾಧಿಗಳು ಎನ್ಕೌಂಟರ್, 258 ಆರೋಪಿಗಳ ಬಂಧನ - ಯುಪಿ ಪೊಲೀಸ್ ಎನ್ಕೌಂಟರ್
ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಪೊಲೀಸರೊಂದಿಗೆ ಎನ್‌ಕೌಂಟರ್‌ನಲ್ಲಿ 13 ಕುಖ್ಯಾತ ಅಪರಾಧಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಮತ್ತು 258 ಜನರನ್ನು ಬಂಧಿಸಲಾಗಿದೆ ಎಂದು ಮುಜಾಫರ್‌ನಗರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅಭಿಷೇಕ್ ಯಾದವ್ ತಿಳಿಸಿದ್ದಾರೆ.
![ಮೂರು ವರ್ಷಗಳಲ್ಲಿ 13 ಅಪರಾಧಿಗಳು ಎನ್ಕೌಂಟರ್, 258 ಆರೋಪಿಗಳ ಬಂಧನ 13-criminals-killed-258-injured-in-police-encounters-over-last-three-years](https://etvbharatimages.akamaized.net/etvbharat/prod-images/768-512-6466471-thumbnail-3x2-shoot.jpg)
ಮುಜಫರ್ ನಗರ ಎಸ್‌ಎಸ್‌ಪಿ
ಹತ್ಯೆಗೀಡಾದ ಅಪರಾಧಿಗಳಲ್ಲಿ ರೋಹಿತ್ ಸಾಂಡು ಮತ್ತು ಮೊಹಮ್ಮದ್ ಶಮೀಮ್ ಕೂಡ ಇದ್ದಾರೆ ಎಂದು ಮುಜಾಫರ್‌ನಗರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅಭಿಷೇಕ್ ಯಾದವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಲ್ಲದೇ ಅಪರಾಧಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ತಲೆಗೆ ಒಂದು ಲಕ್ಷ ಬಹುಮಾನವನ್ನು ಕೂಡ ಘೋಷಣೆ ಮಾಡಲಾಗಿತ್ತು. ಎನ್‌ಕೌಂಟರ್‌ನಲ್ಲಿ 103 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಯುಪಿ ದರೋಡೆಕೋರ ಕಾಯ್ದೆಯಡಿ ಒಟ್ಟು 2.32 ಕೋಟಿ ರೂ. ಮೌಲ್ಯದ ಎಳು ದರೋಡೆಕೋರರ ಆಸ್ತಿಯನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
Last Updated : Mar 19, 2020, 4:40 PM IST