ಕರ್ನಾಟಕ

karnataka

ETV Bharat / bharat

ಶಬ್ಬಾಸ್​​ ವಿನಾಯಕ್​ ಶಬ್ಬಾಸ್​​​​.. ಇದು ಪ್ರಧಾನಿ ನೀಡಿದ ಬೂಸ್ಟ್! - ವಿನಾಯಕ್​ಗೆ ಕರೆ ಮಾಡಿದ ಪ್ರಧಾನಿ,

ಸಿಬಿಎಸ್​ಇ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಕೇರಳದ ವಿದ್ಯಾರ್ಥಿಗೆ ಪ್ರಧಾನಿ ಮೋದಿ ಕರೆ ಮಾಡಿ ಧನ್ಯವಾದಗಳು ತಿಳಿಸಿದ್ದಾರೆ.

Vinayak M Mallil, Prime Minister Modi, Jawahar Navodaya Vidyala, Kerala news, Mann Ki Baat, ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆ, ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆ ಸುದ್ದಿ, ಶಬ್ಬಾಸ್​​ ವಿನಾಯಕ್​ ಶಬ್ಬಾಸ್, ವಿನಾಯಕ್​ಗೆ ಕರೆ ಮಾಡಿದ ಪ್ರಧಾನಿ, ವಿನಾಯಕ್​ಗೆ ಮೋದಿ ಕರೆ,
ಸಂಗ್ರಹ ಚಿತ್ರ

By

Published : Jul 27, 2020, 7:58 AM IST

​​ಕೊಚ್ಚಿ( ಕೇರಳ): ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ವಿನಾಯಕ್​ ಎಂಬ ವಿದ್ಯಾರ್ಥಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಿ ಮಾಡಿದ ಕರೆ ಸ್ವೀಕರಿಸಿದ ವಿದ್ಯಾರ್ಥಿ ತೀವ್ರ ಖುಷಿ ವ್ಯಕ್ತಪಡಿಸಿದ್ದಾರೆ. ಈ ಕರೆ ಸ್ವೀಕರಿಸಿದಾಗ ತಾನು ಸ್ವರ್ಗದಲ್ಲಿ ತೆಲಾಡಿದ ಖುಷಿ ಅನುಭವಿಸಿದೆ ಎಂದು ವಿನಾಯಕ ಹೇಳಿಕೊಂಡಿದ್ದಾರೆ .

‘ಶಹಬ್ಬಾಸ್​​​ ವಿನಾಯಕ ಶಬ್ಬಾಸ್​.. ಹೇಗಿದೆ ಜೋಶ್’​ ಎಂದು ಪ್ರಧಾನಿ ಕೇಳಿದರು ಎಂದು ದೈನಂದಿನ ಕೂಲಿ ಮಾಡುವ ವಿನಾಯಕನ ತಂದೆ ಹೇಳಿದ್ದಾರೆ.

ಎರ್ನಾಕುಲಂ ಮತ್ತು ಇಡುಕ್ಕಿ ಜಿಲ್ಲೆಗಳ ಗಡಿಯಲ್ಲಿರುವ ಹಳ್ಳಿಯವನಾದ ವಿನಾಯಕ್​ಗೆ ಪ್ರಧಾನಿ ಕರೆ ಮಾಡಿದ್ದಾರೆ ಎನ್ನುವುದು ಗೊತ್ತಿರಲಿಲ್ಲ. ಅದು ತಿಳಿದ ಮೇಲೆ ಅವರು ತುಂಬಾ ಖುಷಿಯಾಗಿದ್ದರು. ಒಂದು ಕ್ಷಣ ಅಚ್ಚರಿಯಾದರೂ ಸಾವಳಿಸಿಕೊಂಡು ಮಾತನಾಡಿದೆ ಎಂದು ವಿದ್ಯಾರ್ಥಿ ಹೇಳಿಕೊಂಡಿದ್ದಾನೆ. ವಿನಾಯಕ್​ ಜವಾಹರ್​ ನವೋದಯ ಶಾಲೆಯಲ್ಲಿ ಓದಿ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದ.

ಪ್ರಧಾನಿ ನಿನ್ನೆ ತಮ್ಮ ಮನ್​ಕಿ ಬಾತ್​ ನಲ್ಲಿ ವಿದ್ಯಾರ್ಥಿಯ ಸಾಧನೆಯನ್ನ ಹೊಗಳಿದ್ದರು.

ABOUT THE AUTHOR

...view details