ಕರ್ನಾಟಕ

karnataka

ETV Bharat / bharat

ಊರಿಗೆ ಮರಳಲು ಸಿದ್ಧರಾದ  12,794 ವಲಸೆ ಕಾರ್ಮಿಕರು!

ರಾಜ್ಯದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಸುಸೂತ್ರವಾಗಿ ಅವರವರ ರಾಜ್ಯಗಳಿಗೆ ಕಳುಹಿಸುವ ಸಲುವಾಗಿ ಆಂಧ್ರ ಪ್ರದೇಶ ಸರ್ಕಾರ ಅಂತಾರಾಜ್ಯ ಕಂಟ್ರೋಲ್ ರೂಂ ಸ್ಥಾಪನೆ ಮಾಡಿದ್ದು, ಸಹಾಯವಾಣಿ ಆರಂಭಿಸಿ ಈ ಎಲ್ಲ ಕೆಲಸಗಳ ಉಸ್ತುವಾರಿಗಾಗಿ ನೋಡಲ್ ಅಧಿಕಾರಿಯನ್ನು ನೇಮಿಸಿದೆ.

By

Published : May 1, 2020, 5:57 PM IST

12,794 migrant workers in Andhra Pradesh willing to return home
12,794 migrant workers in Andhra Pradesh willing to return home

ಅಮರಾವತಿ (ಆಂಧ್ರ ಪ್ರದೇಶ): ಕೆಲಸಕ್ಕಾಗಿ ವಿವಿಧ ರಾಜ್ಯಗಳಿಂದ ಬಂದು ಆಂಧ್ರ ಪ್ರದೇಶದಲ್ಲಿ ನೆಲೆಸಿದ್ದ 12,794 ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಕ್ಕೆ ಮರಳಲು ಸಿದ್ಧರಾಗಿ ನಿಂತಿದ್ದಾರೆ. ವಲಸೆ ಕಾರ್ಮಿಕರು ತಮ್ಮೂರಿಗೆ ಮರಳಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಇವರೆಲ್ಲ ಮರಳಿ ಹೋಗಲು ಸಿದ್ಧತೆ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಸುಸೂತ್ರವಾಗಿ ಅವರವರ ರಾಜ್ಯಗಳಿಗೆ ಕಳುಹಿಸುವ ಸಲುವಾಗಿ ಆಂಧ್ರ ಪ್ರದೇಶ ಸರ್ಕಾರ ಅಂತಾರಾಜ್ಯ ಕಂಟ್ರೋಲ್ ರೂಂ ಸ್ಥಾಪನೆ ಮಾಡಿದೆ. ಇದಕ್ಕಾಗಿ ಸಹಾಯವಾಣಿ ಆರಂಭಿಸಿ ಎಲ್ಲ ಕೆಲಸಗಳ ಉಸ್ತುವಾರಿಗಾಗಿ ನೋಡಲ್ ಅಧಿಕಾರಿಯನ್ನು ನೇಮಿಸಿದೆ. ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಆಂಧ್ರ ಪ್ರದೇಶ ಸರ್ಕಾರ ಪತ್ರ ಬರೆದು, ಆಯಾ ರಾಜ್ಯಗಳಿಗೆ ಕಾರ್ಮಿಕರನ್ನು ಕಳುಹಿಸುವ ಸಲುವಾಗಿ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಆರಂಭಿಸಿದೆ.

"ಆಂಧ್ರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದ ಬೇರೆ ರಾಜ್ಯಗಳ 13,255 ಕಾರ್ಮಿಕರನ್ನು ನಾವು ಗುರುತಿಸಿದ್ದೇವೆ. ಇದರಲ್ಲಿ 12,794 ಜನ ತಮ್ಮ ತವರು ರಾಜ್ಯಕ್ಕೆ ಮರಳಲು ಇಚ್ಛಿಸಿದ್ದಾರೆ. ಇನ್ನುಳಿದ 461 ಕಾರ್ಮಿಕರು ಇಲ್ಲೇ ಉಳಿಯುವುದಾಗಿ ಹೇಳಿದ್ದಾರೆ." ಎಂದು ಆಂಧ್ರ ಪ್ರದೇಶ ಸಾರಿಗೆ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಎಂ.ಟಿ. ಕೃಷ್ಣಬಾಬು ತಿಳಿಸಿದ್ದಾರೆ.

"ವಲಸೆ ಕಾರ್ಮಿಕರ ಅನುಕೂಲಕ್ಕಾಗಿ 1902 ಸಂಖ್ಯೆಯ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಹಿರಿಯ ಐಆರ್​ಟಿಎಸ್​ ಅಧಿಕಾರಿ ಅರ್ಜಾ ಶ್ರೀಕಾಂತ್ ಇವರು ನೋಡಲ್ ಅಧಿಕಾರಿಯಾಗಿದ್ದು, ಅಂತಾರಾಜ್ಯ ವಿಷಯಗಳಲ್ಲಿ ಸಮನ್ವಯತೆ ಸಾಧಿಸಲಿದ್ದಾರೆ." ಎಂದು ಕೃಷ್ಣಬಾಬು ತಿಳಿಸಿದರು.

ಸುಮಾರು 4 ಸಾವಿರ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮೂರಿಗೆ ಮರಳಲು ಯತ್ನಿಸಿದ್ದರು. ಅವರೆಲ್ಲರನ್ನು ವಶಕ್ಕೆ ಪಡೆದು ಆಶ್ರಯ ಕೇಂದ್ರಗಳಲ್ಲಿ ಇರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ABOUT THE AUTHOR

...view details