ಭಿಂಡ್:ಹಾವುಗಳೆಂದರೇ ಯಾರು ತಾನೇ ಭಯಪಡುವುದಿಲ್ಲ ಹೇಳಿ, ಅದೇ ಹಾವುಗಳು ಮನೆಯಿಂದ ಹೊರಬಂದರೇ ಎಂತವರಿಗೂ ಭಯವಾಗುತ್ತದೆ. ಹೌದು, ಇಂತಹುದೇ ಒಂದು ಘಟನೆ ಮಧ್ಯಪ್ರದೇಶದ ಮನೆಯೊಂದರಲ್ಲಿ ನಡೆದಿದೆ.
ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ರೌನ್ ಚಾಚೈ ಗ್ರಾಮದ ಮನೆಯಲ್ಲಿ ಪ್ರತಿ ದಿನ 5 ರಿಂದ 25 ಹಾವಿನ ಮರಿಗಳು ಹೊರಬರುತ್ತಿವೆ. ಕಳೆದ 8 ದಿನಗಳಲ್ಲಿ 123 ಹಾವಿನ ಮರಿಗಳು ಮನೆಯಿಂದ ಹೊರಬಂದಿವೆ. ಇದರಿಂದ ಇಡೀ ಕುಟುಂಬದವರು ಭಯ ಭೀತರಾಗಿದ್ದಾರೆ.
ರೌನ್ನ ಚಾಚೈ ಗ್ರಾಮದ ನಿವಾಸಿ ರಾಜ್‌ಕುಮಾರ್ ಕುಶ್ವಾಹ ಮಗ, ರಾಮ್ಪ್ರಕಾಶ್ ಕುಶ್ವಾಹ ಅವರ ಮನೆಯಲ್ಲಿ ಹಾವಿನ ಮರಿಗಳು ನಿರಂತರವಾಗಿ ಹೊರಬರುತ್ತಿವೆ. 12 ಸದಸ್ಯರ ಕುಟುಂಬದಲ್ಲಿ ಅನೇಕರು ಹಾವಿನ ಭಯದಿಂದಾಗಿ ರಾತ್ರಿ ಮಲಗಲು ಪಕ್ಕದ ಮನೆಗಳಿಗೆ ಹೋಗುತ್ತಿದ್ದಾರೆ.
ಎಂಟು ದಿನಗಳ ಹಿಂದೆ ಇದ್ದಕ್ಕಿದ್ದಂತೆ, ಸಂಜೆ 7.30 ಕ್ಕೆ 4 - 5 ಹಾವುಗಳು ಮಹಡಿಯ ಮೇಲೆ ಕಂಡುಬಂದವು, ಆಗ ಕುಟುಂಬದವರು ಹಾವನ್ನು ಮಡಕೆಯಲ್ಲಿ ಇಟ್ಟುಕೊಂಡು ಹಳ್ಳಿಯ ಹೊರಗೆ ಬಿಟ್ಟಿದ್ದರು. ಇಲ್ಲಿಯವರೆಗೆ ಒಟ್ಟು 123 ಹಾವುಗಳು ಹೊರಗಡೆ ಬಂದಿವೆ. ಈ ಹಾವುಗಳು ಎಲ್ಲಿಂದ ಬಂದಿವೆ ಎಂದು ಕಂಡುಹಿಡಿಯಲು ಸಾಧ್ಯವಾಗಿಲ್ಲ.