ಕರ್ನಾಟಕ

karnataka

ETV Bharat / bharat

ವಿಶಾಖಪಟ್ಟಣಂ ಅನಿಲ ಸೋರಿಕೆ ಪ್ರಕರಣ: 12 ಜನರ ಬಂಧನ - ವಿಶಾಖಪಟ್ಟಣಂ ಅನಿಲ ಸೋರಿಕೆ ಪ್ರಕರಣ: 12 ಜನರ ಬಂಧನ

ಎಲ್​​​​ಜಿ ಪಾಲಿಮರ್ಸ್ ಅನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಪೊಲೀಸರು 12 ಜನರನ್ನು ಬಂಧಿಸಿದ್ದಾರೆ. ಅನಿಲ್​​ ಸೋರಿಕೆಗೆ ಕಂಪನಿ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ವರದಿ ನೀಡಲಾಗಿತ್ತು. ಹೀಗಾಗಿ ಆಂಧ್ರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

LG Polymers Gas Leakage case
ವಿಶಾಖಪಟ್ಟಣಂ ಅನಿಲ ಸೋರಿಕೆ ಪ್ರಕರಣ..

By

Published : Jul 8, 2020, 7:39 AM IST

ವಿಶಾಖಪಟ್ಟಣಂ: ಎಲ್​​​​ಜಿ ಪಾಲಿಮರ್ಸ್ ಅನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಪೊಲೀಸರು 12 ಜನರನ್ನು ಬಂಧಿಸಿದ್ದಾರೆ.

ರಾಜ್ಯ ಸರ್ಕಾರ ನೇಮಕ ಮಾಡಿದ ಹೈ - ಪವರ್ ಸಮಿತಿ ನೀಡಿದ ವರದಿ ಆಧರಿಸಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಕಂಪನಿ ಸಿಇಒ ಮತ್ತು ಎಲ್​​​​​ಜಿ ಪಾಲಿಮರ್ಸ್‌ನ 2 ನಿರ್ದೇಶಕರು ಸೇರಿದಂತೆ 12 ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ನಿನ್ನೆ, ಹೈ ಪವರ್ ಕಮಿಟಿ ಕೆಲವು ಪ್ರಮುಖ ಶಿಫಾರಸುಗಳೊಂದಿಗೆ ಸರ್ಕಾರಕ್ಕೆ ವರದಿ ನೀಡಿತ್ತು. ಅನಿಲ್​​ ಸೋರಿಕೆಗೆ ಕಂಪನಿ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ವರದಿ ನೀಡಲಾಗಿತ್ತು. ಹೀಗಾಗಿ ಆಂಧ್ರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ

ABOUT THE AUTHOR

...view details