ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ಮತ್ತೆ ಕೊರೊನಾ ಕೇಕೆ:  ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಸಂಖ್ಯೆ - Kerala news

ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಗಳನ್ನು ಅನುಸರಿಸದಿದ್ದರೆ ಅಂತವರ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ಸಿಎಂ ಪಿಣರಾಯ್​ ವಿಜಯನ್ ಎಚ್ಚರಿಸಿದ್ದಾರೆ.

Pinaray Vijayan
ಸಿಎಂ ಪಿಣರಾಯ್​ ವಿಜಯನ್

By

Published : Mar 21, 2020, 10:07 PM IST

Updated : Mar 21, 2020, 10:24 PM IST

ತಿರುವನಂತಪುರಂ:ಕೇರಳದಲ್ಲಿ ಮತ್ತಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ, ಇದರೊಂದಿಗೆ ಪೀಡಿತರ ಸಂಖ್ಯೆ ಒಟ್ಟು 49ಕ್ಕೆ ಏರಿಕೆ ಕಂಡಿದೆ. ಕಾಸರಗೂಡಿನ ಆರು ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಇಂದು ಮತ್ತೆ ಮೂವರಲ್ಲಿ ಕೊರೊನಾ ಪಾಸಿಟಿವ್​ ಕಂಡು ಬಂದಿದೆ. ಹೀಗಾಗಿ ಕರ್ನಾಟಕ ರಾಜ್ಯದಲ್ಲೂ ಅದರಲ್ಲೂ ಗಡಿ ಭಾಗದಲ್ಲಿ ಆತಂಕ ಹೆಚ್ಚಾಗಿದೆ.

ಕೇರಳ ಸರ್ಕಾರ ಈಗಾಗಲೇ ಹಲವಾರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದಾಗ್ಯೂ ಸರ್ಕಾರದ ಸೂಚನೆಗಳನ್ನು ಅನುಸರಿಸದಿದ್ದರೆ ಅಂತವರ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ಸಿಎಂ ಪಿಣರಾಯ್​ ವಿಜಯನ್ ಎಚ್ಚರಿಸಿದ್ದಾರೆ.

ಕೊವಿಡ್​ 19 ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಅವರು, ಕಾಸರಗೋಡು, ಕಣ್ಣೂರು ಹಾಗೂ ಎರ್ನಾಕುಲಂನಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿರುವ ಮಾಹಿತಿ ನೀಡಿದರು. ಧನಾತ್ಮಕ ವರದಿ ಬಂದವರೆಲ್ಲರೂ ಇತ್ತೀಚೆಗೆ ದುಬೈನಿಂದ ಮರಳಿದವರಾಗಿದ್ದಾರೆ. ಸುಮಾರು 52,785 ಜನರು ಹೋಂ ಕ್ವಾರಂಟೈನ್​ನಲ್ಲಿದ್ದಾರೆ. ಇನ್ನು 228 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ

ಇನ್ನು ಧಾರ್ಮಿಕ ಸ್ಥಳಗಳಲ್ಲಿ ಜನಸಂದಣಿಗೆ ಅವಕಾಶ ನೀಡಬಾರದೆಂದು ಮನವಿ ಮಾಡಿದ ವಿಜಯನ್​, ಕೆಲವು ಸ್ಥಳಗಳಲ್ಲಿ ಜನರು ಕೆಲ ಉತ್ಸವಗಳಲ್ಲಿ ಪಾಲ್ಗೊಂಡಿರುವುದು ತಿಳಿದುಬಂದಿದೆ ಹಾಗಾಗಿ ಇದು ಮತ್ತೆ ಪುನರಾವರ್ತಿತಗೊಳ್ಳದಂತೆ ಧಾರ್ಮಿಕ ಮುಖಂಡರಲ್ಲಿ ಕೇಳಿಕೊಂಡಿದ್ದಾರೆ. ಅಲ್ಲದೇ ರೋಗ ಲಕ್ಷಣ ಹೊಂದಿರುವಂತವರು ದಯವಿಟ್ಟು ತಮ್ಮ ಮನೆಗಳಲ್ಲಿಯೇ ಇರುವಂತೆ ವಿನಂತೆ ಮಾಡಿಕೊಂಡರು.

ನಾಳಿನ ಜನತಾ ಕರ್ಫ್ಯೂಗೆ ಸಹಕರಿಸುವಂತೆ ಕೇಳಿಕೊಂಡ ಅವರು, ತಮ್ಮ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸ್ವಚ್ಚತೆಯ ಕಾರ್ಯದಲ್ಲಿ ತೊಡಗಬೇಕೆಂದು ಹೇಳಿದರು. ಅಲ್ಲದೇ ಕರ್ಫ್ಯೂನ ಭಾಗವಾಗಿ, ಕೊಚ್ಚಿ ಮೆಟ್ರೋ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ಓಡುವುದಿಲ್ಲ, ದಕ್ಷಿಣ ರೈಲ್ವೆ 66 ರೈಲುಗಳನ್ನು ರದ್ದುಗೊಳಿಸಿದೆ. ಜನರು ಇದಕ್ಕೆ ಸಹಕರಿಸಬೇಕೆಂದು ಕೋರಿಕೊಂಡರು.

Last Updated : Mar 21, 2020, 10:24 PM IST

ABOUT THE AUTHOR

...view details