ಕರ್ನಾಟಕ

karnataka

ETV Bharat / bharat

ಶಾಕಿಂಗ್​: ಅಡುಗೆ ಮನೆಯಿಂದ ಹೊರಬಂದ್ವು 12 ನಾಗರಹಾವಿನ ಮರಿಗಳು...! - ನಾಗರಹಾವು

ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಮನೆಯೊಂದರ ಅಡುಗೆ ಮನೆಯಿಂದ ಒಂದೊಂದಾಗೇ 12 ಹಾವಿನ ಮರಿಗಳು ಹೊರ ಬರುವುದನ್ನು ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.

12  cobras came out of the kitchen
ಅಡುಗೆ ಮನೆಯಿಂದ ಹೊರಬಂದ್ವು 12 ನಾಗರಹಾವಿನ ಮರಿಗಳು

By

Published : Jul 20, 2020, 6:07 PM IST

ಭಂಡಾರಾ(ಮಹಾರಾಷ್ಟ್ರ): ಇಲ್ಲಿನ ಭಂಡಾರಾ ಜಿಲ್ಲೆಯ ಮೊಹಾದಿ ತಾಲೂಕಿನ ಜಾಮ್ ಎಂಬ ಗ್ರಾಮದ ಮನೆಯೊಂದರ ಕಿಚನ್​ನಿಂದ 12 ನಾಗರಹಾವಿನ ಮರಿಗಳು ಹೊರಬಂದಿವೆ.

ಅಡುಗೆ ಮನೆಯಿಂದ ಹೊರಬಂದ್ವು 12 ನಾಗರಹಾವಿನ ಮರಿಗಳು

ಮಹಿಳೆಯು ಅಡುಗೆ ಮಾಡುತ್ತಿರುವ ವೇಳೆ ಹಾವು ಬುಸುಗುಟ್ಟುತ್ತಿರುವ ಶಬ್ದ ಕೇಳಿಸಿದ್ದು, ಇದರಿಂದ ಭಯಭೀತರಾಗಿ ಮನೆಯಿಂದ ಹೊರಗೆ ಓಡಿಹೋಗಿದ್ದಾರೆ. ಹಾವು ಹಿಡಿಯುವವರನ್ನು ಕರೆಯಿಸಲಾಗಿದ್ದು, ಸತತ ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಅಲ್ಲಿ ನೆರೆದಿದ್ದವರಿಗೆ ಅಚ್ಚರಿ ಕಾದಿತ್ತು. ಏಕೆಂದರೆ ಅಲ್ಲಿ ಪತ್ತೆಯಾಗಿದ್ದು ಬರೋಬ್ಬರಿ 12 ನಾಗರಹಾವಿನ ಮರಿಗಳು.

ಹೀಗೆ ಒಂದೊಂದಾಗೇ ಹಾವಿನ ಮರಿಗಳನ್ನು ನೋಡಿದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ನಂತರ ಹಾವಿನ ಮರಿಗಳನ್ನು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ.

ABOUT THE AUTHOR

...view details