ನವದೆಹಲಿ:ಉತ್ತರ ಭಾರತದ 12 ನಗರಗಳಲ್ಲಿ ವಾಯುಮಾಲಿನ್ಯವು ಗಂಭೀರ ಮಟ್ಟವನ್ನು ತಲುಪಿದ್ದು, ಅಕ್ಷರಶ ಉಸಿರಾಡಲು ಯೋಗ್ಯವಲ್ಲದ ವಾತಾವರಣ ಸೃಷ್ಟಿಯಾಗಿದೆ.
ಗುರುವಾರದ ವಾಯುಮಾಲಿನ್ಯ ಗುಣಮಟ್ಟ ನಿಯಂತ್ರಣ (ಎಕ್ಯೂಆರ್) ಮಾಪನದ ಅನ್ವಯ, ದೆಹಲಿ ಸೇರಿ 12 ನಗರಗಳ ಮಾಲಿನ್ಯದ ಮಟ್ಟವು 400 ಮತ್ತು ಇದಕ್ಕೂ ಅಧಿಕ ಮಟ್ಟದಲ್ಲಿ ವ್ಯಾಪಿಸಿದೆ ಎಂದುವಾಯುಮಾಲಿನ್ಯ ಗುಣಮಟ್ಟ ನಿಯಂತ್ರಣ ಮಂಡಳಿ ಎಚ್ಚರಿಸಿದೆ. ರಾಷ್ಟ್ರ ರಾಜಧಾನಿ- ಎನ್ಸಿಆರ್ ಪ್ರದೇಶಗಳಲ್ಲಿ ವಾಯುಮಾಲಿನ್ಯ ಅಪಾಯದ ಮಟ್ಟ ಮೀರಿದ್ದು, ಸಾರ್ವಜನಿಕರ ಆರೋಗ್ಯದ ದೃಷ್ಟಿ ಯಿಂದ ಸುಪ್ರೀಂಕೋರ್ಟ್ ವಾಯು ನಿಯಂತ್ರಣ ಮಂಡಳಿ ಸಾರ್ವಜನಿಕರ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.