ಜೈಪುರ:ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಕೊರೊನಾ ವೈರಸ್ ಹರಡುತ್ತಲೇ ಇದೆ. ರಾಜಸ್ಥಾನದ ಜೈಲ್ಲೊಂದರಲ್ಲಿ 116 ಮಂದಿ ಕೈದಿಗಳು ಹಾಗೂ ಜೈಲು ಅಧೀಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ದೊಡ್ಡ ಪ್ರಮಾಣದಲ್ಲಿ ವೈರಸ್ ಹರಡುತ್ತಿರುವುದರಿಂದ ಎಚ್ಚೆತ್ತಿರುವ ಜೈಲಿನ ಆಡಳಿತಾಧಿಕಾರಿಗಳು ವಿಶೇಷ ಮುಂಜಾಗ್ರತಾ ಕ್ರಮಗಳಿಗೆ ಮುಂದಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಜೈಲಿನ ಡಿಐಜಿ ವಿಕಾಸ್ ಕುಮಾರ್, ಜೈಪುರ ಜಿಲ್ಲಾ ಕಾರಾಗೃಹದಲ್ಲಿ 480 ಮಂದಿ ಕೈದಿಗಳಿದ್ದಾರೆ. ಜೈಲು ಅಧೀಕ್ಷಕರು ಸೇರಿ 9 ಮಂದಿ ಕೈದಿಗಳಿಗೆ ಕೊರೊನಾ ಸೋಂಕು ತಗುಲಿರುವುದರಿಂದ ತಿಳಿದ ಕೂಡಲೇ ಇವರಿಂದ ಇತರ ಕೈದಿಗಳ ಪ್ರತ್ಯೇಕಗೊಳಿಸಲಾಗಿತ್ತು. ಇದಾದ ಬಳಿಕ 116 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಹೇಳಿದ್ದಾರೆ.