ಚೆನ್ನೈ: ಕೆಲ ತಿಂಗಳ ಹಿಂದೆ ವಿವಿಧ ಬೇಡಿಕೆಗಳಿಗಾಗಿ ಕೇಂದ್ರದ ವಿರುದ್ಧ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದ ತಮಿಳುನಾಡು ರೈತರು ಸದ್ಯ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸ್ಪರ್ಧೆ ಮಾಡುವ ವಾರಣಾಸಿ ಕ್ಷೇತ್ರದಿಂದ 111 ತಮಿಳುನಾಡು ಅನ್ನದಾತರು ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದಾರೆ.
ವಾರಣಾಸಿಯಲ್ಲಿ ಮೋದಿ ವಿರುದ್ಧ 111 ಅನ್ನದಾತರ ಸ್ಪರ್ಧೆ: ಕಷ್ಟವಾಗುತ್ತಾ ಪ್ರಧಾನಿ ಮೋದಿ ಗೆಲುವು!? - ಚೆನ್ನೈ
ಸಾಲ ಮನ್ನಾ ಹಾಗೂ ರೈತರ ಬೆಳೆಗಳಿಗೆ ಬೆಂಬಲ ಸೇರಿ ನಾವು ಈಗಾಗಲೇ ಕೇಳಿರುವ ಬೇಡಿಕೆಗಳನ್ನ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಬೇಕು, ಒಂದು ವೇಳೆ ಬೇಡಿಕೆ ಪ್ರಕಟಿಸುವ ಭರವಸೆ ನೀಡಿದಿದ್ದರೆ ಮೋದಿ ವಿರುದ್ಧ ಸ್ಪರ್ಧೆ ಮಾಡುತ್ತೇವೆ ಎಂದಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ತಮಿಳುನಾಡು ರೈತ ಮುಖಂಡ ಪಿ ಅಯ್ಯಕಣ್ಣು, ಸಾಲ ಮನ್ನಾ ಹಾಗೂ ರೈತರ ಬೆಳೆಗಳಿಗೆ ಬೆಂಬಲ ಸೇರಿ ನಾವು ಈಗಾಗಲೇ ಕೇಳಿರುವ ಬೇಡಿಕೆಗಳನ್ನ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಬೇಕು, ಒಂದು ವೇಳೆ ಬೇಡಿಕೆ ಪ್ರಕಟಿಸುವ ಭರವಸೆ ನೀಡಿದಿದ್ದರೆ ಮೋದಿ ವಿರುದ್ಧ ಸ್ಪರ್ಧೆ ಮಾಡುತ್ತೇವೆ ಎಂದಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ದೆಹಲಿಯಲ್ಲಿ ಅರೆಬೆತ್ತಲೆ, ತಲೆಬರುಡೆ ಕೈಯಲ್ಲಿ ಹಿಡಿದು ಪ್ರತಿಭಟನೆ ನಡೆಸಿದ್ದ ತಮಿಳುನಾಡು ರೈತರು, ತದನಂತರ ಸಂಸತ್ಗೆ ಮುತ್ತಿಗೆ ಕೂಡ ಹಾಕಿದ್ದರು. ಇದೀಗ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಇದಕ್ಕೆ ಮೋದಿ ಯಾವ ರೀತಿ ಉತ್ತರ ನೀಡುತ್ತಾರೆಂಬುದು ನೋಡಬೇಕಾಗಿದೆ.