ಕರ್ನಾಟಕ

karnataka

ETV Bharat / bharat

ದೇಶಾದಾದ್ಯಂತ ಕೋವಿಡ್ ​-19 ಪರೀಕ್ಷೆಗಳನ್ನು ನಡೆಸಲಿವೆ 111 ಖಾಸಗಿ ಲ್ಯಾಬ್‌ಗಳು - ಕೊವಿಡ್​-19 ಪರೀಕ್ಷೆ

ದೇಶಾದಾದ್ಯಂತ ಒಟ್ಟು 111 ಖಾಸಗಿ ಲ್ಯಾಬ್‌ಗಳು ಕೋವಿಡ್​-19 ಪರೀಕ್ಷೆಗಳನ್ನು ನಡೆಸಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

111 labs across the country will be functional
ಕೊವಿಡ್​-19 ಪರೀಕ್ಷೆ

By

Published : Mar 21, 2020, 7:49 PM IST

ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಕೋವಿಡ್​-19 ಪರೀಕ್ಷೆಗಳನ್ನು ನಡೆಸಲು ಮಾನ್ಯತೆ ಪಡೆದ ಖಾಸಗಿ ಲ್ಯಾಬ್‌ಗಳಿಗೆ ಅನುಮತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಒಟ್ಟು 111 ಖಾಸಗಿ ಲ್ಯಾಬ್‌ಗಳು ಕಾರ್ಯನಿರ್ವಹಿಸಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ 11 ಖಾಸಗಿ ಪ್ರಯೋಗಾಲಯಗಳ ಪಟ್ಟಿಯನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆ, ಡ್ಯಾಂಗ್ ಲ್ಯಾಬ್, ಡಾ.ಲಾಲಾ ಲಜಪತ್​ ಲ್ಯಾಬ್, ಎಸ್‌ಆರ್‌ಎಲ್ ಲಿಮಿಟೆಡ್ (ವಸಂತ್ ವಿಹಾರ್), ಮ್ಯಾಕ್ಸ್ ಲ್ಯಾಬ್, ಎಸ್‌ಆರ್‌ಎಲ್ ಲಿಮಿಟೆಡ್ (ಓಖ್ಲಾ ರಸ್ತೆ), ಫೋರ್ಟಿಸ್ ಆಸ್ಪತ್ರೆ (ಶಾಲಿಮಾರ್ ಬಾಗ್), ಎಸ್‌ಆರ್‌ಎಲ್ ಲಿಮಿಟೆಡ್ (ವಸಂತ್ ಕುಂಜ್), ಲೈಫ್‌ಲೈನ್ ಡಯಾಗ್ನೋಸ್ಟಿಕ್ಸ್, ಆನ್‌ಕ್ವೆಸ್ಟ್ ಲ್ಯಾಬ್​ ಮತ್ತು ಮೆಟ್ರೊಪೊಲೀಸ್ ಹೆಲ್ತ್‌ಕೇರ್ ಪ್ರಯೋಗಾಲಯಗಳಿವೆ.

ಇನ್ನು ಕೋವಿಡ್​-19ನ ಪ್ರತಿ ಪರೀಕ್ಷೆಯ ಬೆಲೆಯನ್ನು 4,500 ನಿಂದ 5000 ರೂ. ಒಳಗೆ ನಿಗದಿಪಡಿಸುವಂತೆ ಐಸಿಎಂಆರ್ ಸೂಚನೆ ನೀಡುವ ಸಾಧ್ಯತೆಯಿದೆ ಎಂದು ನಿನ್ನೆ ಅಧಿಕಾರಿಯೊಬ್ಬರು ಹೇಳಿದ್ದರು. ಇದೀಗ ಪರೀಕ್ಷೆಗಳನ್ನು ಉಚಿತವಾಗಿ ನಡೆಸುವಂತೆ ಕೇಂದ್ರ ಸರ್ಕಾರದ ಬಳಿ ಐಸಿಎಂಆರ್ ಮನವಿ ಮಾಡಿದೆ.

ABOUT THE AUTHOR

...view details