ಅಹಮದಾಬಾದ್: ಗುಜರಾತ್‌ನ ಮಣಿನಗರ ಪ್ರದೇಶದಲ್ಲಿ ದೇವಾಲಯ ಹೊಂದಿರುವ ಸ್ವಾಮಿನಾರಾಯಣ ಪಂಥದ ಒಂದು ವಿಭಾಗಕ್ಕೆ ಸೇರಿದ ಹನ್ನೊಂದು ಸಾಧುಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಜರಾತ್‌ನಲ್ಲಿ ಸ್ವಾಮಿನಾರಾಯಣ ಪಂಥದ 11 ಸಾಧುಗಳಿಗೆ ಕೊರೊನಾ - ಸಾಧುಗಳಿಗೆ ಕೊರೊನಾ
ಎಲ್ಲಾ 11 ಸೋಂಕಿತ ಸಾಧುಗಳು ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ (ಎಎಂಸಿ) ಉಪ ಆರೋಗ್ಯ ಅಧಿಕಾರಿ ಡಾ.ತೇಜಸ್ ಶಾ ತಿಳಿಸಿದ್ದಾರೆ.
ಐವರು ಸಾಧುಗಳು ಅಹಮದಾಬಾದ್‌ನ ಮಣಿನಾನಗರ ದೇವಾಲಯದ ಆವರಣದಲ್ಲಿದ್ದರೆ, ಇತರ ಆರು ಮಂದಿ ಇತರ ಪ್ರದೇಶಗಳಲ್ಲಿ ಉಳಿದುಕೊಂಡಿದ್ದಾರೆ. ಎಲ್ಲಾ 11 ಸೋಂಕಿತ ಸಾಧುಗಳು ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ (ಎಎಂಸಿ) ಉಪ ಆರೋಗ್ಯ ಅಧಿಕಾರಿ ಡಾ.ತೇಜಸ್ ಶಾ ತಿಳಿಸಿದ್ದಾರೆ.
ಆರು ಸಾಧುಗಳಲ್ಲಿ ಐವರು ಅಹಮದಾಬಾದ್‌ನ ನ್ಯೂ ರಾಣಿಪ್ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಒಬ್ಬರು ಇಲ್ಲಿನ ಬಾವ್ಲಾ ಗ್ರಾಮದಲ್ಲಿದ್ದಾರೆ.