ಕರ್ನಾಟಕ

karnataka

ETV Bharat / bharat

106 ವರ್ಷದ ವೃದ್ಧ ಸೇರಿ ಕೊರೊನಾ ಗೆದ್ದ ಒಂದೇ ಕುಟುಂಬದ 11 ಜನ!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದ ಕುಟುಂಬವೊಂದರ 11 ಮಂದಿ ಸದಸ್ಯರು ಇದೀಗ ಸೋಂಕು ಮುಕ್ತರಾಗಿ ಮನೆಗೆ ಮರಳಿದ್ದಾರೆ. ಅಚ್ಚರಿಯ ವಿಷಯವೆಂದರೆ ಕೊರೊನಾ ಗೆದ್ದ ಈ ಕುಟುಂಬ ಸದಸ್ಯರ ಪೈಕಿ 106 ವರ್ಷದ ಒಬ್ಬ ವೃದ್ಧ ಕೂಡ ಇದ್ದಾರೆ.

Eleven members of a family recovered from the coronavirus
ಕೊರೊನಾ ಮುಕ್ತರಾದ ಒಂದೇ ಕುಟುಂಬದ ಹನ್ನೊಂದು ಜನ

By

Published : Jul 12, 2020, 1:28 PM IST

ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷದ 10 ಸಾವಿರ ದಾಟಿದೆ. ಸರ್ಕಾರ ಸೋಂಕು ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದೆ. ಒಂದು ಕುಟುಂಬದ ಒಬ್ಬ ಸದಸ್ಯನಿಂದ ಹಿಡಿದು ಇಡೀ ಕುಟುಂಬವೇ ಸೋಂಕಿಗೆ ತುತ್ತಾದ ಪ್ರಕರಣಗಳೂ ರಾಜಧಾನಿಯಿಂದ ವರದಿಯಾಗಿವೆ.

ಪರಿಸ್ಥಿತಿ ಹೀಗಿರುವಾಗ ಕೊರೊನಾ ಸೋಂಕಿಗೆ ತುತ್ತಾಗಿದ್ದ ಕುಟುಂಬವೊಂದರ 11 ಮಂದಿ ಸದಸ್ಯರು ಇದೀಗ ಸೋಂಕು ಮುಕ್ತರಾಗಿ ಮನೆಗೆ ಮರಳಿದ್ದಾರೆ. ಅಚ್ಚರಿಯ ವಿಷಯವೆಂದರೆ ಕೊರೊನಾ ಗೆದ್ದ ಈ ಕುಟುಂಬ ಸದಸ್ಯರ ಪೈಕಿ 106 ವರ್ಷದ ಒಬ್ಬ ವೃದ್ಧ ಕೂಡ ಇದ್ದಾರೆ. ಹೌದು, ನಾವೀಗ ಹೇಳಲು ಹೊರಟಿರುವುದು ಕೊರೊನಾ ಗೆದ್ದ ನಗರದ ನವಾಬ್​ಗಂಜ್​ನ ಮುಖ್ತಿಯಾರ್​ ಅಹ್ಮದ್​ ಎಂಬುವರ ಕುಟುಂಬದ ಕಥೆಯಾಗಿದೆ.

ಇಡೀ ಕುಟುಂಬವನ್ನು ಆವರಿಸಿತ್ತು ಕೊರೊನಾ:

ಕಳೆದ ಮೇ ತಿಂಗಳು ಮುಖ್ತಿಯಾರ್​ ಅವರ ಕುಟುಂಬ ಸದಸ್ಯರೊಬ್ಬರ ಆರೋಗ್ಯ ಹದಗೆಟ್ಟಿತ್ತು. ಪರೀಕ್ಷಾ ವರದಿಯಲ್ಲಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆ ಬಳಿಕ ಕುಟುಂಬದ ಇನ್ನೊಬ್ಬ ಸದಸ್ಯನಿಗೂ ಸೋಂಕು ತಗುಲಿತ್ತು. ಇವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿರುವ ಸಮಯದಲ್ಲೇ ಕುಟುಂಬದ ಇತರ ಸದಸ್ಯರನ್ನೂ ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ಅವರಿಗೂ ಸೋಂಕು ತಗುಲಿರುವುದು ಗೊತ್ತಾಗಿದೆ. ಇದಾದ ಬಳಿಕ ತಂದೆಯನ್ನು ಭೇಟಿ ಮಾಡಲು ಆಸ್ಪತ್ರೆಗೆ ಬಂದಿದ್ದ ಮೂವರು ಗಂಡು ಮಕ್ಕಳಿಗೂ ಸೋಂಕು ತಗುಲಿತ್ತು. ಒಟ್ಟಾರೆಯಾಗಿ ಕುಟುಂಬದ 11 ಜನ ಸದಸ್ಯರು ಕೊರೊನಾ ಸೋಂಕಿಗೆ ತುತ್ತಾಗಿದ್ದರು.

ಕೊರೊನಾ ಗೆದ್ದ 106 ವರ್ಷದ ವೃದ್ಧ:

ಕೊರೊನಾ ಸೋಂಕಿಗೆ ತುತ್ತಾಗಿದ್ದ ಕುಟುಂಬದ 11 ಜನ ಸದಸ್ಯರೂ ಈಗ ಚೇತರಿಸಿಕೊಂಡಿದ್ದಾರೆ. ಆದರೆ ಗಮನಿಸಬೇಕಾದ ಅಂಶವೆಂದರೆ ಚೇತರಿಸಿಕೊಂಡವರ ಪೈಕಿ 106 ವರ್ಷದ ವೃದ್ಧ ಮುಖ್ತಿಯಾರ್​ ಅಹ್ಮದ್​ ಕೂಡ ಒಬ್ಬರು. ಕೊರೊನಾ ಸೋಂಕಿಗೆ ವೃದ್ಧರೇ ಅತೀ ಹೆಚ್ಚು ಬಲಿಯಾಗುತ್ತಿರುವ ಸಮಯದಲ್ಲಿ ಇಳಿವಯಸ್ಸಿನಲ್ಲಿ ಸೋಂಕು ಮುಕ್ತರಾಗಿ ಮುಖ್ತಿಯಾರ್ ಅಹ್ಮದ್​​ ಅಚ್ಚರಿ ಮೂಡಿಸಿದ್ದಾರೆ.

ಕುಟುಂಬ ಕಾಳಜಿ ವಹಿಸಿತ್ತು:

ಕೊರೊನಾ ಸಮರದಲ್ಲಿ ಗೆದ್ದ ಬಗ್ಗೆ ಮುಖ್ತಿಯಾರ್​ ಅವರು ಈಟಿವಿ ಭಾರತ ಜೊತೆ ಮಾಹಿತಿ ಹಂಚಿಕೊಂಡಿದ್ದು, ಅನಾರೋಗ್ಯದ ಸಮಯದಲ್ಲಿ ಕುಟುಂಬಸ್ಥರು ನನ್ನ ಬಗ್ಗೆ ಕಾಳಜಿ ವಹಿಸಿದ್ದರು. ಚಿಕಿತ್ಸೆಯ ಬಳಿಕ ವರದಿಗಳು ನೆಗೆಟಿವ್ ಬಂದಿವೆ. ಹೀಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗ ಮರಳಿದ್ದೇವೆ. ಆದರೂ ಸೋಂಕಿನ ಕುರಿತು ಇನ್ನೂ ಭಯವಿದೆ ಎಂದಿದ್ದಾರೆ.

ಆಸ್ಪತ್ರೆಯಿಂದ ಮರಳುವಾಗಲು ಎಚ್ಚರಿಕೆ ವಹಿಸಿದರು:

ಕುಟುಂಬದ ಮಹಿಳಾ ಸದ್ಯಸ್ಯೆ ಮಜಿದಾನ್ ಮತ್ತು ಇನ್ನಿಬ್ಬರು ಆಸ್ಪತ್ರೆಗೆ ಭೇಟಿ ನೀಡಿದ್ದಾಗ, ಬಟ್ಟೆ-ಬರೆ, ಆಹಾರ ಎಲ್ಲವನ್ನೂ ಪ್ರತ್ಯೇಕಿಸಿಟ್ಟಿದ್ದರು. ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರು. ಇದು ಕೂಡ ಸೋಂಕು ಮುಕ್ತನಾಗಲು ಸಹಕಾರಿಯಾಗಿಯಿತು ಎಂದು ಮುಖ್ತಿಯಾರ್ ಅಹ್ಮದ್​ ಹೇಳಿದ್ದಾರೆ. ಮಜಿದಾನ್ ಅವರ ಮಗಳು ತೈಬಾ ಮತ್ತು ಅವರ ಮನೆಗೆ ಬಂದಿದ್ದ ಎರಡನೇ ಮಗಳ ಮಗ ಮೊಹಮ್ಮದ್ ಕೈಫ್ ಕೂಡ ಸೋಂಕಿಗೆ ತುತ್ತಾಗಿದ್ದಾರೆ.

ನಮ್ಮ ಸ್ವಂತಕ್ಕಿಂತ ಹೆಚ್ಚು ಕಾಳಜಿ ವಹಿಸಲಾಗಿದೆ:

ಇಡೀ ಕುಟುಂಬ ಕೊರೊನಾ ಗೆದ್ದ ಬಗ್ಗೆ ಸ್ವತಃ ಸೋಂಕಿಗೆ ತುತ್ತಾಗಿದ್ದ ತೈಬಾ ಮತ್ತು ಕೈಫ್ ಈಟಿವಿ ಭಾರತ್​ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಹೇಳಿದ ವಿಷಯವೆಂದರೆ ಕೊರೊನಾ ಗೆದ್ದ ಅವರ ಕುಟುಂಬದ ಹಿರಿಯ ಸದಸ್ಯ ಮುಖ್ತಿಯಾರ್​ ಅವರು ಮೂಲತಃ ಅವರ ಕುಟುಂಬದ ಸದಸ್ಯರಲ್ಲವಂತೆ. ಕೆಲ ವರ್ಷಗಳ ಹಿಂದೆ ದಿಕ್ಕು ದೆಸೆಯಿಲ್ಲದೆ ರಸ್ತೆ ಬದಿ ಇದ್ದ ಅವರನ್ನು ಈ ಕುಟುಂಬ ಕರೆದುಕೊಂಡು ಬಂದು ಆರೈಕೆ ಮಾಡಿದೆ. ಸದ್ಯ, ಮುಖ್ತಿಯಾರ್​ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಅವರನ್ನು ನಮ್ಮ ಸ್ವಂತಕ್ಕಿಂತ ಹೆಚ್ಚು ಕಾಳಜಿ ವಹಿಸಲಾಗುತ್ತಿದೆ ಎಂದು ತೈಬಾ ಹೇಳಿದ್ದಾರೆ.

ABOUT THE AUTHOR

...view details