ಕೊಲ್ಲಂ (ಕೇರಳ): ರಾಜ್ಯ ಸಾಕ್ಷರತಾ ಮಿಷನ್‌ನ ಅತ್ಯಂತ ಹಿರಿಯ ವಿದ್ಯಾರ್ಥಿ105 ವರ್ಷ ವಯಸ್ಸಿನ ಭಾಗೀರಥಿ ಅಮ್ಮ ಕೇಂದ್ರ ಸರ್ಕಾರದ "ನಾರಿ ಶಕ್ತಿ ಪುರಸ್ಕಾರ"ಕ್ಕೆ ಆಯ್ಕೆಯಾಗಿದ್ದಾರೆ.
105 ವರ್ಷದ ಭಾಗೀರಥಿ ಅಮ್ಮ 'ನಾರಿ ಶಕ್ತಿ ಪುರಸ್ಕಾರ'ಕ್ಕೆ ಆಯ್ಕೆ - ಭಾಗೀರಥಿ ಅಮ್ಮ
ರಾಜ್ಯ ಸಾಕ್ಷರತಾ ಮಿಷನ್‌ನ ಅತ್ಯಂತ ಹಿರಿಯ ವಿದ್ಯಾರ್ಥಿ105 ವರ್ಷ ವಯಸ್ಸಿನ ಭಾಗೀರಥಿ ಅಮ್ಮ ಕೇಂದ್ರ ಸರ್ಕಾರದ "ನಾರಿ ಶಕ್ತಿ ಪುರಸ್ಕಾರ"ಕ್ಕೆ ಆಯ್ಕೆಯಾಗಿದ್ದಾರೆ. ಮಾರ್ಚ್ 8ರಂದು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಭಾಗೀರಥಿ ಅಮ್ಮ
ಮಹಿಳಾ ಸಬಲೀಕರಣಕ್ಕಾಗಿ ಅಸಾಧಾರಣ ಕಾರ್ಯಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಧಾನಿ ನರೇಂದ್ರ ಇತ್ತೀಚೆಗೆ ಮಾಸಿಕ ಮನ್ ಕಿ ಬಾತ್ ಕಾರ್ಯಕ್ರಮದಲ್ಲೂ ಭಾಗೀರಥಿ ಅಮ್ಮಾ ಬಗ್ಗೆ ಪ್ರಸ್ತಾಪಿಸಿದ್ದರು.
ಭಾಗೀರಥಿ ಅಮ್ಮ ರಾಜ್ಯ ಸಾಕ್ಷರತಾ ಮಿಷನ್ ನಡೆಸಿದ ಪರೀಕ್ಷೆಯಲ್ಲಿ ಶೇ.75 ಅಂಕಗಳನ್ನು ಅಂಕಗಳೊಂದಿಗೆ ಉತ್ತೀರ್ಣರಾಗಿ ಗ್ರೇಡ್ ನಾಲ್ಕನ್ನು ಪಡೆದಿದ್ದರು. ಮಾರ್ಚ್ 8ರಂದು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ದೂರದ ಪ್ರಯಾಣ ಅಸಾಧ್ಯ ಎಂಬುವುದನ್ನು ಭಾಗೀರಥಿ ಅಮ್ಮ ಈಗಾಗಲೇ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.