ಕರ್ನಾಟಕ

karnataka

ETV Bharat / bharat

ಚೀನಾದ ಸೂಪರ್ ಪವರ್​ ಕನಸಿಗೆ ಭಾರತ ಅಡ್ಡಗಾಲು; ಮೇಜರ್ ಜನರಲ್ ಸಿನ್ಹಾ - ಗಾಲ್ವನ್ ವ್ಯಾಲಿ

ಭಾರತ ಹಾಗೂ ಚೀನಾ ಮಧ್ಯದ ಗಡಿಯ ವಾಸ್ತವ ನಿಯಂತ್ರಣ ರೇಖೆಯಲ್ಲಿ ನಿರ್ದಿಷ್ಟವಾಗಿ ಗುರುತಿಸಲಾದ ಯಾವುದೇ ಗಡಿ ಇಲ್ಲ. ಎರಡೂ ದೇಶಗಳು ಈ ಕುರಿತು ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿವೆ. ಎರಡೂ ಕಡೆಯ ಸೈನಿಕರು ತಮ್ಮ ಗಡಿಗಳನ್ನು ಕಾವಲು ಕಾಯುವುದರಿಂದ ಘರ್ಷಣೆಗಳು ನಡೆಯುವುದು ಸಾಮಾನ್ಯ. ರಾಷ್ಟ್ರದ ಸುರಕ್ಷತೆಗೆ ಯಾವುದೇ ಧಕ್ಕೆ ಬರದಂತೆ ರಕ್ಷಣಾ ಪಡೆಗಳು ಸದಾ ಸಿದ್ಧವಾಗಿರುವಂತೆ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಸಚಿವ ಶ್ರೀಪಾದ ನಾಯ್ಕ ಹೇಳಿದ್ದರು.

Major General SP Sinha
Major General SP Sinha

By

Published : Jul 1, 2020, 5:06 PM IST

ನವದೆಹಲಿ:2016 ರಿಂದ 18 ರ ಎರಡು ವರ್ಷಗಳ ಅವಧಿಯಲ್ಲಿ ಒಟ್ಟು 1,025 ಬಾರಿ ಚೀನಾ ಸೈನಿಕರು ಭಾರತದ ಗಡಿಯೊಳಗೆ ಅತಿಕ್ರಮಣ ಮಾಡಲು ಯತ್ನಿಸಿದ್ದಾರೆ ಎಂದು ಸರ್ಕಾರಿ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಆದರೆ ಈ ಯಾವ ಸಂದರ್ಭಗಳಲ್ಲಿಯೂ ಸೈನಿಕರ ಸಾವು-ನೋವು ಸಂಭವಿಸಿಲ್ಲ. ಭಾರತ-ಚೀನಾ ಮಧ್ಯದ 3,488 ಕಿಮೀ ಉದ್ದದ ಗಡಿಯಲ್ಲಿ 2016 ರಲ್ಲಿ 273, 2017 ರಲ್ಲಿ 426 ಹಾಗೂ 2018 ರಲ್ಲಿ 326 ಗಡಿ ಉಲ್ಲಂಘನೆಯ ಪ್ರಕರಣಗಳು ನಡೆದಿವೆ.

ಭಾರತದ ರಾಜ್ಯಗಳಾದ ಅರುಣಾಚಲ ಪ್ರದೇಶ, ಸಿಕ್ಕಿಂ, ಉತ್ತರಾಖಂಡ್, ಹಿಮಾಚಲ ಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶ ಲಡಾಖ್​ಗಳು ಚೀನಾದೊಂದಿಗೆ ಗಡಿ ಹಂಚಿಕೊಂಡಿವೆ. ಕೇಂದ್ರದ ರಕ್ಷಣಾ ಇಲಾಖೆ ರಾಜ್ಯ ಸಚಿವ ಶ್ರೀಪಾದ ನಾಯ್ಕ ಕಳೆದ ಬಾರಿ ನಡೆದ ಸಂಸತ್ ಅಧಿವೇಶನದಲ್ಲಿ ಈ ಕುರಿತು ಹೇಳಿಕೆಯನ್ನೂ ನೀಡಿದ್ದರು.

"ಭಾರತ ಹಾಗೂ ಚೀನಾ ಮಧ್ಯದ ಗಡಿಯ ವಾಸ್ತವ ನಿಯಂತ್ರಣ ರೇಖೆಯಲ್ಲಿ ನಿರ್ದಿಷ್ಟವಾಗಿ ಗುರುತಿಸಲಾದ ಯಾವುದೇ ಗಡಿ ಇಲ್ಲ. ಎರಡೂ ದೇಶಗಳು ಈ ಕುರಿತು ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿವೆ. ಎರಡೂ ಕಡೆಯ ಸೈನಿಕರು ತಮ್ಮ ಗಡಿಗಳನ್ನು ಕಾವಲು ಕಾಯುವುದರಿಂದ ಘರ್ಷಣೆಗಳು ನಡೆಯುವುದು ಸಾಮಾನ್ಯ. ರಾಷ್ಟ್ರದ ಸುರಕ್ಷತೆಗೆ ಯಾವುದೇ ಧಕ್ಕೆ ಬರದಂತೆ ರಕ್ಷಣಾ ಪಡೆಗಳು ಸದಾ ಸಿದ್ಧವಾಗಿರುವಂತೆ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ." ಎಂದು ಸಚಿವ ಶ್ರೀಪಾದ ನಾಯ್ಕ ಹೇಳಿದ್ದರು.

ಗಡಿ ಉಲ್ಲಂಘನೆಯ ಪ್ರಕರಣಗಳ ಕುರಿತು ಈಟಿವಿ ಭಾರತ್​ನೊಂದಿಗೆ ಮಾತನಾಡಿದ ನಿವೃತ್ತ ಮೇಜರ್ ಜನರಲ್ ಎಸ್​.ಪಿ. ಸಿನ್ಹಾ, "ಚೀನಾ ಸಾಮ್ರಾಜ್ಯ ವಿಸ್ತರಣೆಯ ನೀತಿಯನ್ನು ಅಳವಡಿಸಿಕೊಂಡಿದೆ. ಎರಡು ಹೆಜ್ಜೆ ಮುಂದಿಟ್ಟು ಒಂದು ಹೆಜ್ಜೆ ಹಿಂದೆ ಸರಿಯುವುದು ಚೀನಾ ಕುತಂತ್ರದ ಭಾಗವಾಗಿದೆ. ಉದಾಹರಣೆಗೆ ನೋಡುವುದಾದರೆ- ಚೀನಾ 10 ಕಿಮೀ ಗಡಿಯೊಳಗೆ ನುಸುಳಿ ಬಂದಾಗ ನಾವು ಅವರೊಂದಿಗೆ ಸಂಘರ್ಷಕ್ಕಿಳಿಯುತ್ತೇವೆ. ಆಗ ಅವರು 5 ಕಿಮೀ ಹಿಂದೆ ಸರಿಯುತ್ತಾರೆ. ಆದರೆ ಮುಂದೊಂದು ದಿನ ಮತ್ತೆ 5 ಕಿಮೀ ಒಳಗೆ ಬರುವ ಸಲುವಾಗಿಯೇ ಹಿಂದೆ ಸರಿದಿರುತ್ತಾರೆ." ಎಂದು ಹೇಳಿದರು.

"ಕ್ಸಿ ಜಿನ್​ಪಿಂಗ್ ಅಧ್ಯಕ್ಷರಾದ ನಂತರ ಚೀನಾ ವಿಶ್ವದ ಸೂಪರ್ ಪವರ್ ಆಗುವ ಕನಸು ಕಾಣುತ್ತಿದೆ. ಹೀಗಾಗಿ ಅವರು ಪಕ್ಕದ ದೇಶಗಳನ್ನೂ ತಮ್ಮದೇ ಎನ್ನುತ್ತಾರೆ. 2016-18 ರ ಮಧ್ಯೆ ಭಾರತ-ಚೀನಾ ಗಡಿಯಲ್ಲಿ ನಡೆದ ಘಟನೆಗಳು ಚೀನಾದ ಈ ಮನಸ್ಥಿತಿಯನ್ನು ಬಿಂಬಿಸುತ್ತವೆ." ಎನ್ನುತ್ತಾರೆ ಸಿನ್ಹಾ.

ಇಲ್ಲಿ ಗಮನಿಸಬೇಕಾದ ಮಹತ್ವದ ಸಂಗತಿಯೊಂದಿದೆ. ಚೀನಾ ಭೌಗೋಳಿಕವಾಗಿ 26 ದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಆದರೆ ಇವುಗಳ ಪೈಕಿ 14 ದೇಶಗಳ ಗಡಿಯನ್ನು ಗುರುತಿಸಿಯೇ ಇಲ್ಲ ಎಂಬುದು ಗಮನಾರ್ಹವಾಗಿದೆ.

ಪ್ರಸ್ತುತ ಏಷ್ಯಾದ ಸೂಪರ್ ಪವರ್ ಆಗುವ ಚೀನಾ ಪ್ರಯತ್ನಗಳಿಗೆ ಭಾರತ ಅಡ್ಡಗಾಲಾಗಿದೆ. ಏಷ್ಯಾದಲ್ಲಿ ಭಾರತ ಬಿಟ್ಟರೆ ಬೇರಾವ ದೇಶಕ್ಕೂ ಚೀನಾವನ್ನು ಎದುರು ಹಾಕಿಕೊಳ್ಳುವ ಧೈರ್ಯವಿಲ್ಲ. ಹೀಗಾಗಿಯೇ ಚೀನಾ ಭಾರತದ ವಿರುದ್ಧ ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ ಎಂದು ಮೇಜರ್ ಜನರಲ್ ಸಿನ್ಹಾ ತಿಳಿಸಿದರು.

ABOUT THE AUTHOR

...view details