ಚಿತ್ತೂರು(ಆಂಧ್ರಪ್ರದೇಶ): 101 ವರ್ಷದ ವೃದ್ಧೆ ಕೊರೊನಾ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ.
ಕೊರೊನಾ ಗೆದ್ದು ಬಂದ್ರು 101 ವಯಸ್ಸಿನ ಅಜ್ಜಿ: ಸೋಂಕಿತರಿಗೆ ಸ್ಫೂರ್ತಿಯಾದ ವೃದ್ಧೆ - ಕೊರೊನಾದಿಂದ ಗುಣಮುಖರಾದ ಅಜ್ಜಿ
ಆಂಧ್ರಪ್ರದೇಶದ ಚಿತ್ತೋರ್ ಜಿಲ್ಲೆಯಲ್ಲಿನ ವೃದ್ಧೆ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇವರಿಗೆ 101 ವರ್ಷ ವಯಸ್ಸಾಗಿದ್ದು, ಈ ಇಳಿವಯಸ್ಸಲ್ಲೂ ಕೊರೊನಾಗೆ ಅಂಜದೆ, ಅಳುಕದೆ ವೈದ್ಯರು ನೀಡಿದ ಚಿಕಿತ್ಸೆಗೆ ಸ್ಪಂದಿಸಿ ಕೊರೊನಾದಿಂದ ಗುಣಮುಖರಾಗಿರುವುದು ಇತರೆ ಸೋಂಕಿತರಿಗೆ ಮಾದರಿಯಾಗಿದ್ದಾರೆ.
ಸೋಂಕಿತರಿಗೆ ಸ್ಫೂರ್ತಿಯಾದ ವೃದ್ಧೆ
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿನ ವೃದ್ಧೆ ಕೊರೊನಾದಿಂದ ಗುಣಮುಖರಾಗಿದ್ದಾರೆ. ಈ ಅಜ್ಜಿಗೆ ಕೊರೊನಾ ಇದ್ದಿದ್ದರಿಂದ ಚಿಕಿತ್ಸೆಗಾಗಿ ತಿರುಪತಿ ಸ್ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾದ ಹಿನ್ನೆಲೆ ವೃದ್ಧೆ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಶನಿವಾರ ಸಂಜೆ ಆಸ್ಪತ್ರೆಯಿಂದ ಈ ವೃದ್ಧೆ ಬಿಡುಗಡೆಯಾಗಿದ್ದಾರೆ. ನೂರು ವರ್ಷಗಳನ್ನು ಪೂರೈಸಿರುವ ಈಕೆ ಇತರೆ ಕೊರೊನಾ ಸೋಂಕಿತರಿಗೆ ಸ್ಫೂರ್ತಿಯಾಗಿದ್ದಾರೆ.