ತಿರುವನಂತಪುರಂ: ಕೊರೊನಾ ರೋಗವನ್ನು ನಿಯಂತ್ರಿಸುವಲ್ಲಿ ಕೇರಳದ ಕ್ರಮಗಳನ್ನು ಇಡೀ ವಿಶ್ವವೇ ಕೊಂಡಾಡಿದೆ. ಆದರೆ, ಉದ್ಯೋಗ ಅರಸಿ ಗಲ್ಫರಾಷ್ಟ್ರಗಳಿಗೆ ತೆರಳಿ ಅಲ್ಲಿಯೇ ಬದುಕು ಕಟ್ಟಿಕೊಂಡ ನೂರಕ್ಕೂ ಹೆಚ್ಚು ಕೇರಳಿಗರು ಕೊರೊನಾ ವಿರುದ್ಧ ಹೋರಾಡಿ ಸಾವಿನ ಮನೆಯ ಕದ ತಟ್ಟಿದ್ದಾರೆ.
ಉದ್ಯೋಗ ಅರಸಿ ಗಲ್ಫ್ ದೇಶಗಳಿಗೆ ಹೋದ 100 ಕೇರಳಿಗರು ಕೊರೊನಾಗೆ ಬಲಿ - Thiruvananthapuram news
ಗಲ್ಫ್ ದೇಶಗಳಲ್ಲಿ ವಾಸವಾಗಿರುವ ನೂರಕ್ಕೂ ಹೆಚ್ಚು ಮಂದಿ ಕೋವಿಡ್-19 ರೋಗಕ್ಕೆ ತುತ್ತಾಗಿದ್ದಾರೆ. ಇದರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ 62 ಮಂದಿ, ಕುವೈತ್ 18, ಒಮಾನ್ 2 ಹಾಗೂ ಕತಾರ್ನಲ್ಲಿ ಓರ್ವ ವ್ಯಕ್ತಿ ಬಲಿಯಾಗಿದ್ದಾರೆ.
ಸದ್ಯಕ್ಕೆ ಆ ದೇಶಗಳಲ್ಲಿ ನೂರಕ್ಕೂ ಹೆಚ್ಚು ಕೇರಳಿಗರು ಈ ಮಾರಕ ರೋಗಕ್ಕೆ ತುತ್ತಾಗಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಮಧ್ಯಪ್ರಾಚ್ಯ ದೇಶಗಳಲ್ಲಿ ನೆಲೆಸುವ ಆಸೆಯು ಕಳೆದ ನಾಲ್ಕಕ್ಕೂ ಹೆಚ್ಚು ದಶಕಗಳಿಂದ ಶುರುವಾಗಿದ್ದು, ತನ್ನ ರಾಜ್ಯದ ನಿವಾಸಿಗರ ಅಲ್ಲಿನ ಸಂಪಾದನೆಯೇ ಕೇರಳ ಆರ್ಥಿಕತೆಯ ಬೆನ್ನೆಲುಬಾಗಿದೆ. ಕೊರೊನಾಗೆ ತುತ್ತಾಗಿರುವವರ ಪೈಕಿ ಯುಎಇಯದ್ದೇ ಸಿಂಹಪಾಲು. ಅಲ್ಲಿ ಇಲ್ಲಿಯವರೆಗೆ 62 ಮಂದಿ ಮೃತಪಟ್ಟರೆ, ಕುವೈತ್ 18, ಸೌದಿ ಅರೇಬಿಯಾ 17 ಒಮಾನ್ 2 ಹಾಗೂ ಕತಾರ್ನಲ್ಲಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾರೆ.
ಅಧ್ಯಯನದ ಪ್ರಕಾರ, 25 ಲಕ್ಷಕ್ಕೂ ಹೆಚ್ಚು ಮಂದಿ ಕೇರಳಿಗರು ಮಧ್ಯಪ್ರಾಚ್ಯ ರಾಷ್ಟಗಳಲ್ಲಿ ನೆಲೆಸಿದ್ದಾರೆ. ಕೋವಿಡ್ನಿಂದ ಸಾವಿಗೀಡಾದದವರ ಮೃತದೇಹಗಳನ್ನು ತಾಯ್ನಾಡಿಗೆ ತರದೇ ನಿಯಮಾನುಸಾರ ವಿದೇಶಗಳಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.